ಇದೊಂದು ದುಬಾರಿ ಅಪಘಾತವೆನ್ನಬಹುದು. ಟೆಸ್ಲಾ ಕಾರು $ 3.5 ಮಿಲಿಯನ್ ಖಾಸಗಿ ಜೆಟ್‌ಗೆ ಅಪ್ಪಳಿಸಿದೆ.
ಕಾರಿನ ಮಾಲೀಕರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಸ್ವಯಂಚಾಲಿತ ಪಾರ್ಕಿಂಗ್ ಅಥವಾ ‘ಸ್ಮಾರ್ಟ್ ಸಮ್ಮನ್’ ಮೋಡ್ ಸಕ್ರಿಯಗೊಳಿಸಿದ್ದರು. ಆದರೆ ದಿಕ್ಕು ತಪ್ಪಿದ ಕಾರು ಜೆಟ್‌ಗೆ ಡಿಕ್ಕಿ ಹೊಡೆದಿದೆ. ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಜೆಟ್‌ಗೆ ಕಾರು ಡಿಕ್ಕಿ ಹೊಡೆದಿದ್ದನ್ನು ನೋಡಬಹುದಾಗಿದೆ.
ಈ ಘಟನೆಯು ವಾಷಿಂಗ್ಟನ್‌ನಲ್ಲಿರುವ ಸ್ಪೋಕೇನ್‌ನಲ್ಲಿರುವ ಫೆಲ್ಟ್ಸ್ ಫೀಲ್ಡ್‌ನಲ್ಲಿ ವಿಮಾನ ತಯಾರಕ ಕಂಪನಿ ಸಿರಸ್ ಪ್ರಾಯೋಜಿಸಿದ್ದ ಸಮಾರಂಭದಲ್ಲಿ ನಡೆದಿದೆ.
ಈ ರಾಶಿಯವರಿಗೆ ಇಂದು ಇರಲಿದೆ ಲಾಭದಾಯಕ ದಿನ
ಟೆಸ್ಲಾ ಕಾರಿನ ಮಾಲೀಕರು ಸ್ಮಾರ್ಟ್ ಸಮ್ಮನ್ ವೈಶಿಷ್ಟ್ಯ ಬಳಸುತ್ತಿದ್ದರು, ಅದು ಪಾರ್ಕಿಂಗ್‌ಗೆ ನ್ಯಾವಿಗೇಟ್ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ ಅಲ್ಲೊಂದು ಯಡವಟ್ಟು ನಡೆದು, ಕಾರು ವಿಮಾನಕ್ಕೆ ಅಪ್ಪಳಿಸಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಈ ಘಟನೆಯಲ್ಲಿ ಮುಂದೇನಾಯಿತೆಂದು ಗೊತ್ತಾಗಿಲ್ಲ.