ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧವು ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಹಮಾಸ್ ಮಕ್ಕಳನ್ನು ಒಳಗೊಂಡಂತೆ ಇಸ್ರೇಲಿ ಒತ್ತೆಯಾಳುಗಳನ್ನು ಹೇಗೆ ಬಳಸುತ್ತಿದೆ ಎಂಬುದನ್ನು ತೋರಿಸುವ ಶಾಕಿಂಗ್ ವಿಡಿಯೋ ಹೊರಬಿದ್ದಿದೆ.
ಹಮಾಸ್ ಲೈವ್-ಸ್ಟ್ರೀಮ್ ಮಾಡಿದ ವಿಡಿಯೋದಲ್ಲಿ ಗನ್ ಮ್ಯಾನ್ ಒಬ್ಬ ಕುಟುಂಬಕ್ಕೆ ಮಾತನಾಡಲು ಆದೇಶಿಸುವುದನ್ನು ಕಾಣಿಸುತ್ತದೆ. ತನ್ನ ಕಾಲಿನಿಂದ ರಕ್ತಸ್ರಾವವಾಗುತ್ತಿದ್ದ ಒಬ್ಬ ವ್ಯಕ್ತಿ, ಅವನ ಹೆಂಡತಿ ಪಕ್ಕದಲ್ಲಿ ಕುಳಿತಿದ್ದಾಳೆ, ಚಿಕ್ಕ ಹುಡುಗಿ ತನ್ನ ಮಡಿಲಲ್ಲಿ. ಇನ್ನಿಬ್ಬರು ಮಕ್ಕಳು ದಂಪತಿಗಳ ಎರಡೂ ಬದಿಯಲ್ಲಿ ಕುಳಿತುಕೊಂಡಿದ್ದಾರೆ, ಹುಡುಗಿ ಕಿರುಚುವುದನ್ನು ತಡೆಯಲು ಬಾಯಿಯನ್ನು ಹಿಡಿದಿದ್ದಾಳೆ.
ನಿಮ್ಮ ದೇಶದೊಂದಿಗೆ ಮಾತನಾಡಿ, ನಾವು ಇಲ್ಲಿದ್ದೇವೆ ಎಂದು ಅವರಿಗೆ ತಿಳಿಸಿ ಎಂದು ಬಂದೂಕುಧಾರಿ ಹೇಳುತ್ತಾನೆ. ಹಮಾಸ್ ಬಂಡುಕೋರರು ಗಾಜಾಕ್ಕೆ ಸಮೀಪವಿರುವ ನಹಲ್ ಓಜ್‌ನ ಕಿಬ್ಬತ್ಜ್ ನಲ್ಲಿರುವ ತಮ್ಮ ಮನೆಯಲ್ಲಿದ್ದಾರೆ ಎಂದು ಅವರು ಹೇಳುತ್ತಾರೆ. ಅಲ್ಲದೆ ಆ ವ್ಯಕ್ತಿ ತನ್ನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಹೇಳುತ್ತಾನೆ.
ಒಬ್ಬ ಹಮಾಸ್ ಬಂಡುಕೋರ ಗುರುತಿನ ಚೀಟಿಯನ್ನು ಆ ವ್ಯಕ್ತಿಗೆ ಕೇಳುತ್ತಾನೆ. ಅದನ್ನು ಹುಡುಕಲು ಅವನು ಎದ್ದೇಳಬೇಕೆಂದುಹೇಳಿದಾಗ, ಒತ್ತೆಯಾಳು ತೆಗೆದುಕೊಳ್ಳುವವರಲ್ಲಿ ಒಬ್ಬನು ಅವನಿಗೆ ಸಹಾಯ ಮಾಡುತ್ತಾನೆ, ಅವನ ಕಾಲಿನ ಮೇಲೆ ವಿಪರೀತ ರಕ್ತಸ್ರಾವದ ಗಾಯ ಸ್ಪಷ್ಟವಾಗಿ ಗೋಚರಿಸುತ್ತದೆ.
ನಂತರ ಬಂದೂಕುಧಾರಿಗಳು ದಂಪತಿಯ ಮಗನನ್ನು ಬಂದೂಕು ತೋರಿಸಿ, ನೆರೆಹೊರೆಯ ಇತರ ಜನರನ್ನು ತಮ್ಮ ಮನೆಗಳನ್ನು ತೊರೆಯುವಂತೆ ಹೇಳಲು ಒತ್ತಾಯಿಸುತ್ತಿದ್ದಾರೆ.
ಹಮಾಸ್ ಬೆದರಿಕೆ
ಮಕ್ಕಳು ಮತ್ತು ಹತ್ಯಾಕಾಂಡದಿಂದ ಬದುಕುಳಿದವರನ್ನು ಒಳಗೊಂಡಂತೆ ಕನಿಷ್ಠ 150 ಒತ್ತೆಯಾಳುಗಳನ್ನು ಹಮಾಸ್ ಹಿಡಿದಿಟ್ಟುಕೊಂಡಿದೆ. ಗಾಜಾ ಪಟ್ಟಿಯಲ್ಲಿರುವ ನಾಗರಿಕರ ಮನೆಯ ಮೇಲೆ ಎಚ್ಚರಿಕೆಯಿಲ್ಲದೆ ಇಸ್ರೇಲ್ ಪ್ರತಿ ಬಾರಿ ಬಾಂಬ್ ಅನ್ನು ಬೀಳಿಸಿದಾಗ ಒಬ್ಬ ಒತ್ತೆಯಾಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ.
ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಮುತ್ತಿಗೆ ಹಾಕಲು ಆದೇಶಿಸಿದ ನಂತರ, ವಿದ್ಯುತ್ ಮತ್ತು ನೀರನ್ನು ಕಡಿತಗೊಳಿಸಿ, 2.3 ಮಿಲಿಯನ್ ಜನರು ವಾಸಿಸುವ ಜನನಿಬಿಡ ಪ್ರದೇಶಕ್ಕೆ ಆಹಾರ ಮತ್ತು ಇಂಧನವನ್ನು ಪ್ರವೇಶಿಸುವುದನ್ನು ನಿಲ್ಲಿಸಿದ ನಂತರ ಹಮಾಸ್ ನಿಂದ ಈ ಎಚ್ಚರಿಕೆ ಬಂದಿದೆ.
ಹಿಂತಿರುಗಿ ಇಲ್ಲವೇ?
ಒತ್ತೆಯಾಳುಗಳ ಹತ್ಯೆ ನಡೆಸುತ್ತಿದ್ದರೂ, ಇಸ್ರೇಲಿ ಸರ್ಕಾರವು ಹಮಾಸ್ ವಿರುದ್ಧದ ತನ್ನ ಬೃಹತ್ ಮಿಲಿಟರಿ ಆಕ್ರಮಣ ನಿಲ್ಲಿಸುವ ಯಾವುದೇ ಲಕ್ಷಣಗಳನ್ನು ಕಾಣಿಸುತ್ತಿಲ್ಲ. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ ಅನ್ನು ISIS ಗೆ ಹೋಲಿಸಿದ್ದು, ಅದನ್ನು ನಾಶಮಾಡಲು ಮತ್ತು “ಮಧ್ಯಪ್ರಾಚ್ಯವನ್ನು ಬದಲಾಯಿಸುವ” ನಿರಂತರ ಯುದ್ಧದ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.
ಹಮಾಸ್ ಭಯೋತ್ಪಾದಕರು ಮಕ್ಕಳನ್ನು ಬಂಧಿಸಿ, ಸುಟ್ಟುಹಾಕಿದ್ದಾರೆ ಮತ್ತು ಗಲ್ಲಿಗೇರಿಸಿದ್ದಾರೆ. ಅವರು ಅನಾಗರಿಕರು. ಹಮಾಸ್, ಐಸಿಸ್ ಗಿಂತಲೂ ಕ್ರೂರವಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಮಂಗಳವಾರ ಗಾಜಾ ಗಡಿಯಲ್ಲಿ ನಿಯೋಜಿಸಲಾದ ಸೈನ್ಯವನ್ನು ಉದ್ದೇಶಿಸಿ ಮಾತನಾಡುವಾಗ ಕಠಿಣ ನಿಲುವು ಪ್ರಕಟಿಸಿದ್ದಾರೆ. ಅವರು ರಕ್ಷಣಾ ಪಡೆಗೆ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಿದ್ದಾರೆ. ಗಾಜಾ “ಅದು ಮೊದಲಿದ್ದ ಸ್ಥಿತಿಗೆ ಎಂದಿಗೂ ಹಿಂತಿರುಗುವುದಿಲ್ಲ” ಎಂದು ಹೇಳಿದ್ದಾರೆ.
ನೀವು ಇಲ್ಲಿ ವಾಸ್ತವವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತೀರಿ. ನೀವು ಬೆಲೆ ತೆರಬೇಕಾಗುತ್ತದೆ. ಮತ್ತು ಬದಲಾವಣೆಯನ್ನು ನೋಡುತ್ತೀರಿ. ಹಮಾಸ್ ಗಾಜಾದಲ್ಲಿ ಬದಲಾವಣೆಯನ್ನು ಬಯಸಿದೆ. ಅದು ಯೋಚಿಸಿದ್ದಕ್ಕಿಂತಲೂ 180 ಡಿಗ್ರಿಗಳಷ್ಟು ಬದಲಾಗುತ್ತದೆ ಎಂದು ಹೇಳಿದ್ದಾರೆ.
ಹಮಾಸ್ ಶನಿವಾರ ಇಸ್ರೇಲ್‌ಗೆ 5,000 ರಾಕೆಟ್‌ಗಳನ್ನು ಉಡಾಯಿಸಿದೆ. ನಂತರ ವಾಯು, ಭೂಮಿ ಮತ್ತು ಸಮುದ್ರದಿಂದ ಬಹು-ಹಂತದ ದಾಳಿಯನ್ನು ಪ್ರಾರಂಭಿಸಿದ್ದು, ಇದಾದ ನಂತರ ಪ್ರಾರಂಭವಾದ ಮಾರಣಾಂತಿಕ ಸಂಘರ್ಷದಲ್ಲಿ ಕನಿಷ್ಠ 3,000 ಜನರು ಸಾವನ್ನಪ್ಪಿದ್ದಾರೆ.
https://twitter.com/HananyaNaftali/status/1711891911051477472