ನವದೆಹಲಿ: ಡಿಟಿಹೆಚ್ ರೀತಿ ಡೈರೆಕ್ಟ್ ಮೊಬೈಲ್(ಡಿ2ಎಂ) ತಂತ್ರಜ್ಞಾನ ಸೇವೆ ಆರಂಭವಾಗಿದೆ. ಇಂಟರ್ನೆಟ್ ಇಲ್ಲದಿದ್ದರೂ ಮೊಬೈಲ್ ನಲ್ಲಿ ಟಿವಿ ವೀಕ್ಷಿಸಬಹುದು. ಬೆಂಗಳೂರು ಸೇರಿ 19 ನಗರಗಳಲ್ಲಿ ಡಿಟುಎಂ ಸೇವೆ ಆರಂಭಿಸಲಾಗುತ್ತಿದೆ.
ಮನೆಗಳಿಗೆ ಕೇಬಲ್ ಎಳೆದು ಟಿವಿ ವೀಕ್ಷಿಸುವ ಪದ್ಧತಿಯನ್ನು ಡಿಟಿಹೆಚ್ ತಂತ್ರಜ್ಞಾನ ಬದಲಾಯಿಸಿತ್ತು. ಈಗ ಡಿಟಿಹೆಚ್, ಮೊಬೈಲ್ ಇಂಟರ್ನೆಟ್ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಡಿಟಿಹೆಚ್(ಡೈರೆಕ್ಟ್ ಟು ಮೊಬೈಲ್) ತಂತ್ರಜ್ಞಾನ ಬಂದಿದೆ. ಬೆಂಗಳೂರು ಸೇರಿ ದೇಶದ 19 ನಗರಗಳಲ್ಲಿ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಮೊಬೈಲ್ ಗಳಲ್ಲಿ ಟಿವಿ ಚಾನೆಲ್ ಗಳ ನೇರಪ್ರಸಾರ ಸೇರಿ ಯಾವುದೇ ವಿಡಿಯೋ ವೀಕ್ಷಿಸಬಹುದು. ಐಐಟಿ ಕಾನ್ ಪುರ, ಸಂಖ್ಯಾ ಲ್ಯಾಬ್ ಗಳು ಈ ಡಿ2ಎಂ ತಂತ್ರಜ್ಞಾನ ಅಭಿವೃದ್ಧಿಪಡಿಸಿವೆ.