ಅನ್ವಿಶ್ ಅಭಿನಯದ ‘ಸ್ವೇಚ್ಛಾ’ ಇನ್ನೇನು ತೆರೆ ಮೇಲೆ ಸಜ್ಜಾಗಿದ್ದು, ಚಿತ್ರತಂಡ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಇದೀಗ ಈ ಚಿತ್ರದ ‘ಪ್ರೀತಿ ತನಂತಾನೆ’ ಎಂಬ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ರಾಜೇಶ್ ಕೃಷ್ಣನ್ ಮತ್ತು ಅನುರಾಧ ಭಟ್ ಈ ಹಾಡಿಗೆ ಧ್ವನಿಯಾಗಿದ್ದು, ಲೋಕಿ ತವಸ್ಯ ಅವರ ಸಂಗೀತ ಹಾಗೂ ಸಾಹಿತ್ಯವಿದೆ.
ಈ ಚಿತ್ರವನ್ನು ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್ ನಲ್ಲಿ ಸ್ಟಾರ್ ಮಸ್ತಾನ್ ನಿರ್ಮಾಣ ಮಾಡಿದ್ದು, ಅನ್ವಿಶ್ ಗೆ ಜೋಡಿಯಾಗಿ ಪವಿತ್ರ ನಾಯಕ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸ್ಪಂದನ, ಬೇಬಿ ಶ್ರೀ, ಕೆ ಆರ್ ಮುರಾರಿ ರೆಡ್ಡಿ, ಪ್ರಕಾಶ್, ರೇವಣ್ಣ, ಮಾಲಾಶ್ರೀ, ವಿನಯ್ ದೇವರಾಜ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಸುರೇಶ್ ರೆಡ್ಡಿ ಸಂಭಾಷಣೆ, ಪವನ್ ಬಿ.ಕೆ. ಸಂಕಲನ, ಸಿ.ಎಸ್. ಸತೀಶ್ ಛಾಯಾಗ್ರಹಣ, ಸುರೇಶ್ ರಾಜು ನೃತ್ಯ ನಿರ್ದೇಶನವಿದೆ.