ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮದುವೆ ಮೆರವಣಿಗೆ ವೇಳೆ ಇಬ್ಬರು ಬೈಕ್ ಸವಾರರು ವರನ ಮೇಲೆ ಗುಂಡು ಹಾರಿಸಿದ ಪರಿಣಾಮ ವಿವಾಹದ ಅತಿಥಿಗಳು ಗಾಬರಿಗೊಂಡಿದ್ದಾರೆ. ಆದರೆ ಕೂಡಲೇ ಸಮಯಪ್ರಜ್ಞೆ ಮೆರೆದ ವರ ಬಾಗಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದು, ಸೋಮವಾರ ರಾತ್ರಿ ಗ್ವಾಲಿಯರ್ ನ ಜನಕ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಗುಂಡಿನ ದಾಳಿ ರಸ್ತೆ ಬದಿಯಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೀಪಗಳ ಬೆಳಕಿನಲ್ಲಿ ಮದುವೆ ಮರೆವಣಿಗೆ ಸಾಗುತ್ತಿರುವುದು ಮೊದಲಿಗೆ ಕಾಣಿಸುತ್ತದೆ. ವರ ಸಾರೋಟಿನಲ್ಲಿ ಕುಳಿತಿದ್ದು ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ವರನನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ವರ ಕೆಳಗೆ ಬಾಗಿದ ಕಾರಣ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾನೆ.
ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಂತರ ವರನ ತಂದೆಯ ದೂರು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಜನಕ್‌ಗಂಜ್ ಪೊಲೀಸ್ ಠಾಣೆಯ ಪ್ರಭಾರಿ ವಿಪೇಂದ್ರ ಸಿಂಗ್ ಚೌಹಾಣ್ ಪ್ರಕಾರ, ಸೋಮವಾರ ರಾತ್ರಿ ವರ ಸಚಿನ್ ಪಾಂಡೆ ಮೆರವಣಿಗೆ ಮೂಲಕ ಮದುವೆ ಸ್ಥಳಕ್ಕೆ ಹೋಗುತ್ತಿದ್ದರು. ಮೆರವಣಿಗೆ ರಾತ್ರಿ 9 ಗಂಟೆಗೆ ಛತ್ರಿ ಮಂಡಿ ನಾಗ್ ದೇವತಾ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಪಾಂಡೆಯನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ. ಆದರೆ ವರ ಬಾಗಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Caught on CCTV: Goons open fire at groom during baraat in Gwalior#MadhyaPradesh #MadhyaPradeshnews #Gwalior pic.twitter.com/OH2QksnWov
— Free Press Madhya Pradesh (@FreePressMP) December 3, 2024