ನಾರ್ವೆಯ ಪ್ರಖ್ಯಾತ ಸಾಹಸಿ ಕೆನ್ ಸ್ಟೋರ್ನೆಸ್ ಮತ್ತೊಂದು ಸಾಹಸಮಯ ದಾಖಲೆ ಮಾಡಿದ್ದಾರೆ. ಇವರು ತಮ್ಮ ಧೈರ್ಯಶಾಲಿ ಸಾಹಸಗಳಿಂದ್ಲೇ ಇನ್ ಸ್ಟಾಗ್ರಾಂ ಖಾತೆಯಲ್ಲಿ 4 ಲಕ್ಷ 96 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ.
ಇದೀಗ ಅವರೆಲ್ಲರೂ ಕೆನ್ ಸ್ಟೋರ್ನೆಸ್ ಅವರ ಸಾಹಸ ನೋಡಿ ದಂಗಾಗಿದ್ದಾರೆ. ಚಳಿ ಲೆಕ್ಕಿಸದೇ ಅತಿ ಎತ್ತರದ ಹಿಮ ಪ್ರದೇಶವೊಂದರಲ್ಲಿ ನಿಂತಿರುವ ಕೆನ್, ಮಂಜುಗಟ್ಟಿರುವ ನೀರಿನೊಳಗ್ಗೆ ಭಯವಿಲ್ಲದೇ ಧೈರ್ಯದಿಂದ ಜಂಪ್ ಮಾಡುತ್ತಾರೆ.
ತಾವು ಜಂಪ್ ಮಾಡುವ ಮೊದಲು ನೀರಿನೊಳಕ್ಕೆ ಕಲ್ಲೊಂದನ್ನು ಎತ್ತಿ ಹಾಕಿದ ಬಳಿಕ ಅವರು ಎತ್ತರದಿಂದ ನೀರಿನೊಳಕ್ಕೆ ಧುಮುಕುತ್ತಾರೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಾಗರೂಕ ತಂಡವು ನೀರಿನಲ್ಲಿ ಬೋಟ್ ನಲ್ಲಿ ಸಿದ್ಧವಾಗಿರುತ್ತದೆ. ಈ ಮೂಲಕ ಅವರು ಗಮನಾರ್ಹವಾದ 40.5 ಮೀಟರ್ (132 ಅಡಿ) ಎತ್ತರದಿಂದ ಡೈವ್ ಮಾಡಿದ ದಾಖಲೆ ಸೃಷ್ಟಿಸಿದರು. ಡಿಸೆಂಬರ್ 3 ರಂದು ಹಂಚಿಕೊಂಡಿರುವ ಈ ವಿಡಿಯೋ 143 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದ್ದು 3 ಮಿಲಿಯನ್ ಲೈಕ್ಸ್ ಪಡೆದಿದೆ. ಕೆನ್ ಸ್ಟೋರ್ನೆಸ್ ತನ್ನ ಧೈರ್ಯಶಾಲಿ ಸಾಹಸಗಳಿಗೆ, ನಿರ್ದಿಷ್ಟವಾಗಿ ಡೆತ್ ಡೈವ್ ಗಳಿಗೆ ಪ್ರಸಿದ್ಧರಾಗಿದ್ದಾರೆ.