ಉತ್ತರಪ್ರದೇಶ ಕಾನ್ಪುರದ ಸಿಹಿತಿಂಡಿ ಅಂಗಡಿಯೊಂದರಲ್ಲಿ ಪಾನಮತ್ತ ಪೊಲೀಸ್, ಅಂಗಡಿಯವರೊಂದಿಗೆ ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಗಡಿಯವರೊಂದಿಗೆ ಇನ್ಸ್ ಪೆಕ್ಟರ್
ಆಕ್ರಮಣಕಾರಿಯಾಗಿ ವರ್ತಿಸುವುದನ್ನು ವೀಡಿಯೊದಲ್ಲಿ ಕಾಣಬಹುದು.
ತನ್ನ ಆರ್ಡರ್‌ಗೆ ಹಣ ಪಾವತಿಸಲು ಕೇಳಿದಾಗ ಪೋಲೀಸ್ ತನ್ನ ಶಾಂತತೆಯನ್ನು ಕಳೆದುಕೊಂಡು ಆಕ್ರಮಣಕಾರಿಯಾಗಿ ವರ್ತಿಸಿದ್ದಾನೆ. ಆರ್ಡರ್ ಗೆ ಹಣ ಪಾವತಿಸಲು ಕೇಳಿದಾಗ ಪೊಲೀಸ್, ಅಂಗಡಿಯವನನ್ನ ತಳ್ಳುವುದು, ನೂಕುವುದು ಮತ್ತು ಜೋರಾಗಿ ಧಮ್ಕಿ ಹಾಕುವುದನ್ನ ಮಾಡಿದ್ದಾರೆ. ಈ ಘಟನೆಯನ್ನ ವ್ಯಕ್ತಿಯೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಪೊಲೀಸ್ ಅಂಗಡಿಯವರೊಂದಿಗೆ ಜಗಳವಾಡಿದ ನಂತರ ಎಷ್ಟು ಪಾವತಿಸಬೇಕು ಎಂದು ಕೇಳುತ್ತಾರೆ. ಅಂಗಡಿಯವರು ಆರ್ಡರ್‌ಗೆ 110 ರೂಪಾಯಿಯನ್ನು ಪಾವತಿಸಬೇಕು ಎಂದು ಹೇಳಿದಾಗ, ಕುಡಿದಿದ್ದ ಪೋಲೀಸ್ ಯುಪಿಐ ಸ್ಕ್ಯಾನ್ ಮೂಲಕ ಪಾವತಿಸಲು ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಸ್ಕ್ಯಾನ್ ಮಾಡಲೂ ಸಹ ಆಗದ ಸ್ಥಿತಿಯಲ್ಲಿರುತ್ತಾರೆ.
ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಕಾನ್ಪುರ ಮತ್ತು ಯುಪಿ ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಿ ಆರೋಪಿತ ಪೋಲೀಸ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಳಿದ್ದಾರೆ.
ಕಾನ್ಪುರ ಪೊಲೀಸರು ಆಪಾದಿತರನ್ನು ಅಮಾನತುಗೊಳಿಸಲಾಗಿದೆ ಮತ್ತು ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.