ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದೆಲ್ಲಾ ನೋಡಲು ಹಿತವೆನಿಸುವುದಿಲ್ಲ.
ಆಸ್ಟ್ರೇಲಿಯಾದ ಪರ್ತ್ ಬಳಿ ಇರುವ ರಾಟ್ನೆಸ್ ದ್ವೀಪದಲ್ಲಿ ಕಿಡಿಗೇಡಿಯೊಬ್ಬ ಕೊಕ್ಕಾ ಎಂಬ ಜೀವಿಯೊಂದಕ್ಕೆ ಬಲವಂತವಾಗಿ ಇ-ಸಿಗರೇಟ್ ಸೇದುವಂತೆ ಮಾಡುತ್ತಿರುವ ವಿಡಿಯೋವೊಂದು ನೆಟ್ಟಿಗರಲ್ಲಿ ಸಿಟ್ಟು ತರಿಸಿದೆ. ಇದೇ ವೇಳೆ ಮೂಕ ಜೀವಿಯು ತನ್ನ ಹಿಂದಿನ ಕಾಲುಗಳ ಮೇಲೆ ನಿಂತಿದೆ.
ಬಿಯರ್ ಬಳಸಿ ಚರ್ಮ ಸಮಸ್ಯೆಗೆ ಹೇಳಿ ʼಗುಡ್ ಬೈʼ…!
ಮೂಕ ಪ್ರಾಣಿಗೆ ಹೀಗೆ ಹಿಂಸೆ ನೀಡುತ್ತಿರುವ ಈ ಟೀನೇಜರ್‌ನ ಕೃತ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲು ಆತನನ್ನು ಜೈಲಿಗೆ ಹಾಕಿ ಎಂದು ಆಗ್ರಹಿಸಿದ್ದಾರೆ.
“ಇದು ಬಹಳ ಬೇಜವಾಬ್ದಾರಿ ಹಾಗೂ ಅಕ್ಷೇಪಾರ್ಹ ವರ್ತನೆ. ಈ ಅಸಹಾಯಕ ಮೂಕ ಪ್ರಾಣಿಗೆ ಹೀಗೆ ಚಿತ್ರಹಿಂಸೆ ಕೊಡಲಾಗುತ್ತಿದೆ. ಈ ಪ್ರಾಣಿಗಳು ಬಹಳ ದುರ್ಬಲ ಜೀವಿಗಳು. ಅವು ಮಾನವರೊಂದಿಗೆ ಬಹಳ ಸುಲಭವಾಗಿ ಸಂವಹನ ಮಾಡುತ್ತವೆ, ಅವು ನಮ್ಮಿಂದ ಓಡಿ ಹೋಗುವುದಿಲ್ಲ. ಅವು ನಮ್ಮನ್ನು ಬಯಸಿ ಬರುತ್ತವೆ” ಎಂದು 9ನ್ಯೂಸ್‌ನ ಹನ್ನನ್ ಡ್ರೀವರ್ ತಿಳಿಸುತ್ತಾರೆ.