ಮುಂಬೈ: ಶಿವಸೇನಾ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಅವರು ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನಕ್ಕೆ ಆದೇಶ ನೀಡಿದ್ದಾರೆ ಎನ್ನಲಾಗಿರುವ ವಿಡಿಯೋ ತುಣುಕು ವೈರಲ್ ಆಗಿದೆ.
ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಮೊಬೈಲ್ ನಲ್ಲಿ ಮಾತನಾಡಿದ ಪರಬ್, “ಏನು ಮಾಡುತ್ತಿದ್ದೀರಿ? ಯಾಕೆ ಅವರನ್ನು ನೀವು ಬಂಧಿಸುತ್ತಿಲ್ಲ? ಕಸ್ಟಡಿಗೆ ಯಾಕೆ ತೆಗೆದುಕೊಳ್ಳುತ್ತಿಲ್ಲ. ನೀವು ಅವರನ್ನು ಬಂಧಿಸಬೇಕಾಗುತ್ತದೆ. ಅವರು ಯಾವ ಆದೇಶವನ್ನು ಕೇಳುತ್ತಿದ್ದಾರೆ? ಅಂತಹ ಯಾವುದೇ ಆದೇಶದ ಅಗತ್ಯವಿಲ್ಲ. ಯಾಕೆಂದರೆ ಜಾಮೀನಿಗಾಗಿ ಅವರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಹಾಗೂ ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ. ನೀವು ನಿಮ್ಮ ಪೊಲೀಸ್ ಬಲವನ್ನು ಬಳಸಿ ಅವರನ್ನು ಬಂಧಿಸಿ ಎಂದು ಹೇಳುವ ಸಂಭಾಷಣೆಯು ಮರಾಠಿ ವಾಹಿನಿಯೊದರ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಅವರು ಯಾರಿಗೆ ಸೂಚನೆ ನೀಡುತ್ತಿದ್ದರು” ಎಂಬ ಬಗ್ಗೆ ಗೊತ್ತಾಗಿಲ್ಲ.
ಸೆಪ್ಟೆಂಬರ್ 1ರಂದು ಬಿಡುಗಡೆಯಾಗಲಿದೆ ‘ಭಜರಂಗಿ2’ ಚಿತ್ರದ ಟ್ರೈಲರ್
ಇನ್ನು ಪರಬ್ ಅವರ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಬಿಜೆಪಿ ಕೆಂಡಾಮಂಡಲವಾಗಿದೆ. “ಆಡಳಿತ ಪಕ್ಷ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದೆ. ಪೊಲೀಸ್ ಬಲವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಕೋರ್ಟ್ ಮೊರೆ ಹೋಗುವುದಾಗಿ” ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಸಿಎಂ ಉದ್ಧವ್ ಠಾಕ್ರೆಗೆ ಕಪಾಳಮೋಕ್ಷ ಮಾಡುತ್ತಿದೆ ಎಂಬ ನಾರಾಯಣ್ ರಾಣೆ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ರಾಣೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಾಗೂ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಅವರಿಗೆ ಕೋರ್ಟ್ ನಲ್ಲಿ ಜಾಮೀನು ದೊರಕಿತ್ತು.