
ಸೋಮವಾರ ತಡರಾತ್ರಿ ಸಿಎಂ ತಮ್ಮ ನಿವಾಸಕ್ಕೆ ಹಿಂತಿರುಗುವಾಗ ರಕ್ಷಕರ ಗುಂಪನ್ನು ಗಮನಿಸಿದ ನಂತರ, ಏನಾಯಿತು ಎಂದು ನೋಡಲು ಸ್ಥಳಕ್ಕೆ ತೆರಳಿದ್ದಾರೆ. ತಮ್ಮ ವಾಹನದಿಂದ ಕೆಳಗಿಳಿದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ತಕ್ಷಣವೇ ಸಿಎಂ ರಕ್ಷಕರಿಗೆ ಸಹಾಯ ಹಸ್ತ ನೀಡಿದ್ದಾರೆ ಮತ್ತು ಆಳವಾದ ಕಂದಕದಿಂದ ಹಸುವನ್ನು ರಕ್ಷಿಸುವ ಪ್ರಯತ್ನದಲ್ಲಿ ಜೊತೆಯಾಗಿದ್ದಾರೆ. ರಕ್ಷಕರೊಂದಿಗೆ ಗೋವನ್ನು ಹೇಗೆ ಸುರಕ್ಷಿತವಾಗಿ ಎಳೆಯುವುದು ಎಂಬುದರ ಕುರಿತು ಕಾರ್ಯತಂತ್ರದ ಬಗ್ಗೆ ಕೂಡ ಸಿಎಂ ಚರ್ಚಿಸಿದ್ದಾರೆ.
ಈ ಸಂಬಂಧ ಟ್ವಿಟ್ಟರ್ ನಲ್ಲಿ ವಿಡಿಯೋ ಸಹಿತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಹಸುವಿನ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಗಿಯುವವರೆಗೂ ಪಂಜಾಬ್ ಸಿಎಂ ಸ್ಥಳದಲ್ಲೇ ಉಳಿದಿದ್ದರು. ರಕ್ಷಕರು ಹಸುವನ್ನು ಹಳ್ಳದಿಂದ ಹೊರತೆಗೆಯಲು ಹಗ್ಗಗಳನ್ನು ಬಳಸಿದಾಗ ಸಿಎಂ ಟಾರ್ಚ್ ಹಿಡಿದು ಬೆಳಕು ಕಾಣುವಂತೆ ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದ ಜನರು ಸಿಎಂಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಅವರು ಕೆಲವು ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದು, ಅವರ ಯೋಗ ಕ್ಷೇಮವನ್ನು ಕೂಡ ವಿಚಾರಿಸಿದ್ದಾರೆ.
ವಿಡಿಯೋವನ್ನು ಸುಮಾರು 30,000ಕ್ಕಿಂತ ಹೆಚ್ಚು ಮಂದಿ ವೀಕ್ಷಿಸಿದ್ದು, ಸಿಎಂ ರಕ್ಷಣಾ ಕಾರ್ಯಾಚರಣೆ ವೇಳೆ ಹಾಜರಾಗಿದ್ದಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.