ಪುಣೆಯಲ್ಲಿ ಇಬ್ಬರು ಹುಡ್ಗರು ಬಿಎಮ್‌ಡಬ್ಲ್ಯು ಕಾರಲ್ಲಿ ಫುಲ್ ರೌಡಿ ತರಹ ಮಾಡ್ತಿದ್ರು. ಒಬ್ಬ ಹುಡ್ಗ ರಸ್ತೆಯಲ್ಲಿ ಮೂತ್ರ ಮಾಡ್ತಿದ್ದ, ಇನ್ನೊಬ್ಬ ಕಾರಲ್ಲಿ ಕೂತು ವಿಡಿಯೋ ಮಾಡ್ತಿದ್ದ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯ್ತು.
ಪೊಲೀಸರು ಸುಮ್ಮನೆ ಬಿಡ್ತಾರಾ ? ಇಬ್ಬರನ್ನೂ ಎಳೆದು ತಂದು ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ರು. ಎಲ್ಲಿ ತಪ್ಪು ಮಾಡಿದ್ರೋ ಅಲ್ಲೇ ಕರ್ಕೊಂಡು ಹೋಗಿ ನಿಲ್ಲಿಸಿ, ಜನರೆಲ್ಲಾ ನೋಡುವ ಹಾಗೆ ಮಾಡಿದ್ರು. ಇನ್ಮೇಲೆ ಈ ತರಹ ಮಾಡಬಾರದು ಅಂತ ಸ್ಟ್ರಾಂಗ್ ವಾರ್ನಿಂಗ್ ಕೊಟ್ಟಿದ್ದಾರೆ.
ಒಬ್ಬ ಹುಡ್ಗನನ್ನ ಅವನ ಮನೆಗೆ ಹೋಗಿ ಎತ್ತಾಕೊಂಡು ಬಂದ್ರು, ಇನ್ನೊಬ್ಬನನ್ನ ಸತಾರಾ ಹತ್ರ ಹಿಡಿದರು. ಇಬ್ಬರನ್ನೂ ಕೋರ್ಟ್ಗೆ ಹಾಜರುಪಡಿಸಿ, ಮಾರ್ಚ್ 10 ರವರೆಗೆ ಪೊಲೀಸ್ ಕಸ್ಟಡಿಗೆ ಕೊಟ್ಟಿದ್ದಾರೆ.
ಇಷ್ಟೆಲ್ಲಾ ಆದ್ಮೇಲೆ, ಆ ಹುಡ್ಗ ಕ್ಷಮೆ ಕೇಳಿ ಒಂದು ವಿಡಿಯೋ ಹಾಕಿದ್ದಾನೆ. “ಪೊಲೀಸ್ ಡಿಪಾರ್ಟ್ಮೆಂಟ್ ಮತ್ತೆ ಶಿಂಧೆ ಸಾಹೇಬ್” ಗೆ ಕ್ಷಮೆ ಕೇಳುತ್ತಿದ್ದೇನೆ ಅಂತಾ ಹೇಳಿದ್ದಾನೆ. ಆದ್ರೆ, ಯಾರಿಗೆ ಕ್ಷಮೆ ಕೇಳುತ್ತಿದ್ದಾನೆ ಅಂತಾ ಕ್ಲಿಯರ್ ಆಗಿ ಹೇಳಿಲ್ಲ.
ಪೊಲೀಸರು ಮಾತ್ರ ಸ್ಟ್ರಾಂಗ್ ಆಗಿ ಹೇಳ್ತಿದ್ದಾರೆ, ಸಾರ್ವಜನಿಕ ಸ್ಥಳದಲ್ಲಿ ತಪ್ಪು ಮಾಡಿದ್ರೆ ಸುಮ್ಮನೆ ಬಿಡಲ್ಲ ಅಂತ. ಕಾನೂನು ಎಲ್ಲರಿಗೂ ಒಂದೇ.
View this post on Instagram