ಮುಜಾಫರ್‌ನಗರ: ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಖಾಸಗಿ ಶಾಲೆಯೊಂದರ ಪಿಟಿ ಶಿಕ್ಷಕನನ್ನು ವಿದ್ಯಾರ್ಥಿಯ ತಾಯಿ ಮತ್ತು ಸಹೋದರಿ ಶೂಗಳಿಂದ ಥಳಿಸಿರುವ ಆಘಾತಕಾರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ವಾರ್ಷಿಕ ಕಾರ್ಯಕ್ರಮದ ವೇಳೆ ಪ್ರವೇಶದ ಬಗ್ಗೆ ವಾದ – ವಿವಾದದ ನಂತರ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ನ್ಯೂ ಮಂಡಿ ಪ್ರದೇಶದಲ್ಲಿರುವ ಜಿಸಿ ಪಬ್ಲಿಕ್ ಸ್ಕೂಲ್ ಜೂನಿಯರ್ ವಿಂಗ್‌ನಲ್ಲಿ ಈ ಘಟನೆ ಸಂಭವಿಸಿದ್ದು, “ಗ್ರೇನ್ ಫಿಯೆಸ್ಟಾ – 2024, ದಿ ಅವೇಕನಿಂಗ್” ಎಂಬ ವಾರ್ಷಿಕ ಕಾರ್ಯಕ್ರಮಕ್ಕೆ ಪ್ರವೇಶದ ವಿವಾದದ ನಂತರ ವಿದ್ಯಾರ್ಥಿ ಮತ್ತು ಪಿಟಿ ಶಿಕ್ಷಕರ ನಡುವೆ ವಾಗ್ವಾದ ಆರಂಭವಾಗಿತ್ತು. ವೈರಲ್ ಆದ ವಿಡಿಯೊ ಆಧರಿಸಿ ಪೊಲೀಸರು ಈಗ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಮಾರಂಭದಲ್ಲಿ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಬಂದಿದ್ದ ವಿದ್ಯಾರ್ಥಿಗೆ ಪಿಟಿ ಶಿಕ್ಷಕ ಕಪಾಳಮೋಕ್ಷ ಮಾಡಿದ್ದು, ಮಹಿಳೆಯರು ಸಹ ಶಿಕ್ಷಕರಿಗೆ ಹೊಡೆಯಲು ಪ್ರಾರಂಭಿಸುತ್ತಾರೆ. ಇದರ ಮಧ್ಯೆಯೂ ಶಿಕ್ಷಕ ವಿದ್ಯಾರ್ಥಿಗೆ ಥಳಿಸುವುದನ್ನು ನಿಲ್ಲಿಸಲಿಲ್ಲ.
ಶಿಕ್ಷಕ ವಿದ್ಯಾರ್ಥಿಯನ್ನು ಮೂಲೆಗೆ ತಳ್ಳಿ, ಹೊಡೆದಿದ್ದಾನೆ. ಮಗುವನ್ನು ಅಮಾನುಷವಾಗಿ ಥಳಿಸುತ್ತಿದ್ದ ಶಿಕ್ಷಕನನ್ನು ವಿದ್ಯಾರ್ಥಿಯ ತಾಯಿ ಮತ್ತು ಸಹೋದರಿ ವಿದ್ಯಾರ್ಥಿಯಿಂದ ದೂರ ಎಳೆಯಲು ಯತ್ನಿಸಿದ್ದಾರೆ. ಶಿಕ್ಷಕರನ್ನು ತಡೆಯುವ ಯತ್ನದಲ್ಲಿ ಅವರು ಪಿಟಿ ಶಿಕ್ಷಕನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಸ್ಥಳದಲ್ಲಿದ್ದ ಇತರ ಶಿಕ್ಷಕರು ಜಗಳವನ್ನು ತಡೆಯಲು ಮಧ್ಯಪ್ರವೇಶಿಸಿದ್ದಾರೆ.
ಹೊಡೆದಾಟ ಮುಗಿದ ನಂತರ ಇಬ್ಬರು ಭದ್ರತಾ ಸಿಬ್ಬಂದಿ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಡೆದಾಟದಲ್ಲಿ ಪಿಟಿ ಶಿಕ್ಷಕನ ಶರ್ಟ್ ಹರಿದಿದೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ವಿಡಿಯೋ ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅವರು ಪಿಟಿ ಶಿಕ್ಷಕರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ.
#यूपी के #मुज़फ्फरनगर में प्राइवेट स्कूल में PT के टीचर की जमकर पिटाई का वीडियो वायरल !!
वार्षिक प्रोग्राम में एंट्री को लेकर हुई थी बहस,
पुलिस ने वीडियो के आधार पर किया केस दर्ज !!वार्षिक प्रोग्राम में भाग लेने पहुंचे छात्र ने की पिटाई, छात्र की मां व बहन ने भी की टीचर के साथ… pic.twitter.com/98DLHSke85
— MANOJ SHARMA LUCKNOW UP🇮🇳🇮🇳🇮🇳 (@ManojSh28986262) November 21, 2024
सम्बन्धित प्रकरण में थाना नई मण्डी पुलिस द्वारा आवश्यक कार्यवाही की जा रही है।
— MUZAFFARNAGAR POLICE (@muzafarnagarpol) November 21, 2024