ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಆಸಕ್ತಿದಾಯಕ ವೀಡಿಯೊಗಳು ಯಾವಾಗಲೂ ವೈರಲ್ ಆಗುತ್ತವೆ. ಇದೀಗ, ಮಹಿಳೆಯೊಬ್ಬರು ಹಳ್ಳಿ ರಸ್ತೆಯಲ್ಲಿ ತನ್ನ ಕುದುರೆ ಮತ್ತು ಸಾಕು ನಾಯಿಯೊಂದಿಗೆ ಸ್ಪೀಡ್ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋ ಟ್ರೆಂಡಿಂಗ್ ಆಗಿದೆ.
ಬ್ಯೂಟೆಂಗೆಬೀಡೆನ್ ಎಂಬ ಬಳಕೆದಾರರು ಅದನ್ನು ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆಯೊಬ್ಬರು ಹಸಿರು ಹೊಲದ ಮಧ್ಯೆ ಹಾದು ಹೋಗುವ ರಸ್ತೆಯಲ್ಲಿ ರೋಲರ್‌ಬ್ಲೇಡಿಂಗ್ ಮಾಡುತ್ತಿರುವಾಗ ಅವರ ನಾಯಿ ಮತ್ತು ಕುದುರೆ ರೇಸ್‌ನಲ್ಲಿ ಆಕೆಯೊಂದಿಗೆ ವೇಗವಾಗಿ ಹೋಗುವುದನ್ನು ವೀಡಿಯೊದಲ್ಲಿ ನೋಡಬಹುದು.
ಕುದುರೆಯು ಅಕೆಯ ವೇಗವನ್ನು ಅನುಸರಿಸಲು ಹಿಂದೆ ಓಡುತ್ತಿದ್ದರೆ, ನಾಯಿಯು ಅವರಿಗಿಂತ ಮುಂದೆ ಓಡುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ, ಕುದುರೆಯು ವೇಗವನ್ನು ಪಡೆದುಕೊಳ್ಳುತ್ತಿದ್ದಂತೆ ಪಕ್ಕದಲ್ಲಿ ಓಡುವುದನ್ನು ನೋಡಬಹುದು.
ವೈರಲ್ ವೀಡಿಯೊ ಟ್ವಿಟರ್‌ನಲ್ಲಿ ಸುಮಾರು 7.5 ಮಿಲಿಯನ್ ವೀಕ್ಷಣೆ ಗಳಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 13ಕೆ ವೀಕ್ಷಣೆಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ನೆಟ್ಟಿಗರನೇಕರು ಈ ಪ್ರಯತ್ನಕ್ಕೆ ಅಚ್ಚರಿ ವ್ಯಕ್ತಪಡಿಸಿ ಖುಷಿಪಟ್ಟಿದ್ದಾರೆ.