
ಹೊಸ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣವು ನೋಯ್ಡಾ ಸೆಕ್ಟರ್ 121 ರಲ್ಲಿ ಹಂತ 3 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ.
ನೋಯ್ಡಾದ ಕ್ಲಿಯೋ ಕೌಂಟಿ ಸೊಸೆೈಟಿಯ ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಗೆ ಹಲವು ಬಾರಿ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.
ಮಹಿಳೆ ವೃತ್ತಿಯಲ್ಲಿ ಪ್ರೊಫೆಸರ್ ಎಂದು ಹೇಳಲಾಗಿದ್ದು, ಸಣ್ಣ ಜಗಳದ ನಂತರ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾಳೆ, ಇದೀಗ ಈ ವಿಚಾರ ಪೊಲೀಸರ ಗಮನಕ್ಕೂ ಬಂದಿದೆ.
ಮೂವರು ಸೆಕ್ಯುರಿಟಿ ಗಾರ್ಡ್ಗಳು ಗೇಟ್ ಬಳಿ ಇದ್ದು, ಇಬ್ಬರು ಏನೋ ಚರ್ಚೆ ನಡೆಸುತ್ತಿದ್ದಾಗ ಒಬ್ಬ ಸೆಕ್ಯುರಿಟಿ ಗಾರ್ಡ್ ಕಪಾಳಕ್ಕೆ ಮಹಿಳೆ ಬಾರಿಸುವುದು ಕಾಣಿಸುತ್ತದೆ. ಆತ ಏನೋ ಸಮಜಾಯಿಷಿ ಕೊಡುತ್ತಿದ್ದರೂ ಅದನ್ನು ಕೇಳುವ ವ್ಯವಧಾನ ಆಕೆಗಿರಲಿಲ್ಲ.
ಕಳೆದ ತಿಂಗಳು ಭವ್ಯಾ ರೆೈ ಎಂಬ ಮಹಿಳೆ ಗೇಟ್ ತಡವಾಗಿ ತೆರೆದಿದ್ದಕ್ಕಾಗಿ ನೋಯ್ಡಾ ಸೊಸೆೈಟಿಯ ಅಸಹಾಯಕ ಸೆಕ್ಯುರಿಟಿ ಗಾರ್ಡ್ನ ಮೇಲೆ ನಿಂದನೆಯನ್ನು ಮಾಡಿದ್ದು, ಬಳಿಕ ಆಕೆಯನ್ನು ಬಂಧಿಸಿ 14 ದಿನಗಳ ಕಾಲ ಕಸ್ಟಡಿಯಲ್ಲಿ ಇರಿಸಲಾಗಿತ್ತು.
2 ನಿಮಿಷಗಳ ಅವಧಿಯ ವೀಡಿಯೊದಲ್ಲಿ, ಮದ್ಯದ ಅಮಲಿನಲ್ಲಿದ್ದ ರೈ, ಗಾರ್ಡ್ನ ಕೈಯನ್ನು ಹಿಡಿದುಕೊಂಡು ದೌರ್ಜನ್ಯ ಎಸಗುತ್ತಿರುವುದು ಕಂಡುಬಂದಿತ್ತು.