
ಹೌದು, ಬೀದಿ ನಾಯಿಯೊಂದು ಸಂಗೀತವನ್ನು ಆನಂದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸಂಗೀತಗಾರ ಗಿಟಾರ್ ನುಡಿಸುತ್ತಾ ಹಾಡಿದ್ದಾನೆ. ಈ ಮ್ಯೂಸಿಕ್ ಅನ್ನು ಶ್ವಾನವು ಆನಂದಿಸುತ್ತಾ ಕೇಳುತ್ತಾ ಕುಳಿತಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈ ವಿಡಿಯೋವನ್ನು ಗುಡ್ ನ್ಯೂಸ್ ವರದಿಗಾರರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದು ಮುದ್ದಾದ ಬೀದಿ ನಾಯಿಯು ಬಾರ್ ಬಳಿ ಸಂಗೀತವನ್ನು ಆನಂದಿಸುತ್ತಿದೆ. ನಾಯಿಯು ಸಂಗೀತವನ್ನು ಶ್ರದ್ಧೆಯಿಂದ ಆಲಿಸಿದೆ. ನಂತರ ಸಂಗೀತಗಾರನ ಬಳಿಗೆ ತೆರಳಿ ಮುದ್ದಾಡಿದೆ. ಅಷ್ಟೇ ಅಲ್ಲ ಅದು ಕೂಡ ಗಿಟಾರ್ ನುಡಿಸಲು ಪ್ರಯತ್ನಿಸಿದೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ 43 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗವನ್ನು ನೆಟ್ಟಿಗರು ಹೃದಯ ಹಾಗೂ ಪ್ರೀತಿಯ ಎಮೋಜಿಯಿಂದ ತುಂಬಿದ್ದಾರೆ.