
ದೆಹಲಿಯಿಂದ ಶ್ರೀನಗರದ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಸ್ಪೈಸ್ ಜೆಟ್ ಪೈಲಟ್ ಉಲ್ಲಾಸದ ಕಾವ್ಯಾತ್ಮಕ ಘೋಷಣೆ ಮಾಡಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗಿದ್ದು, ಕೆಲಸದಲ್ಲಿ ಬದ್ಧತೆ ಇದ್ದರೆ ಹೇಗೆ ತಮ್ಮ ಸುತ್ತಲಿನ ಜನರನ್ನು ರಂಜಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ವೈರಲ್ ವಿಡಿಯೋವನ್ನು ಈಪ್ಸಿತಾ ಎಂಬ ಬಳಕೆದಾರರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಆಕೆ ಸ್ಪೈಸ್ ಜೆಟ್ ವಿಮಾನದಲ್ಲಿ ದೆಹಲಿಯಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದಾಗ ಪೈಲಟ್ ಪ್ರಯಾಣಿಕರಿಗೆ ತಮಾಷೆಯ ಪ್ರಕಟಣೆಯನ್ನು ಪ್ರಾರಂಭಿಸಿದ ಕುರಿತು ಬರೆದುಕೊಂಡಿದ್ದಾರೆ.
ಕ್ಯಾಪ್ಟನ್ ಎಲ್ಲಾ ಪ್ರಮುಖ ಮಾಹಿತಿ ಮತ್ತು ಸೂಚನೆಗಳನ್ನು ಪ್ರಾಸಬದ್ಧವಾಗಿ, ಕಾವ್ಯಾತ್ಮಕ ರೀತಿಯಲ್ಲಿ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರಯಾಣಿಕರು ನಗುವುದನ್ನು ಸಹ ಕೇಳಬಹುದಾಗಿದೆ. ಇದಕ್ಕೆ ಹಲವಾರು ಮಂದಿ ಕಮೆಂಟ್ ಮಾಡುತ್ತಿದ್ದು, ಕ್ಯಾಪ್ಟನ್ಗೆ ಶಹಬ್ಬಾಸ್ ಎನ್ನುತ್ತಿದ್ದಾರೆ.