ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಬಮುರ್ಹಿಯಾ ಗ್ರಾಮದಲ್ಲಿ ಹನುಮಂತನ ವಿಗ್ರಹದಿಂದ ಕೆಂಪು ಬಣ್ಣದ ನೀರು ಸೋರುತ್ತಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅನೇಕ ಬಳಕೆದಾರರು ಇದು ರಕ್ತವಲ್ಲ, ನೀರೂ ಅಲ್ಲ ಎಂದು ಹೇಳಿದ್ದಾರೆ. ಮಂಗಳವಾರ ರಾತ್ರಿ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ವೈರಲ್ ಆದ ಕೂಡಲೇ ಗ್ರಾಮಸ್ಥರು ಮೂರ್ತಿಗೆ ಪೂಜೆ ಸಲ್ಲಿಸಲು ನೆರೆದಿದ್ದರು.
ಇತ್ತೀಚೆಗೆ, ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಗಣೇಶ ಮತ್ತು ಶಿವನ ವಿಗ್ರಹಗಳು ಹಾಲು ಕುಡಿಯುತ್ತಿವೆ ಎಂಬ ವದಂತಿಯೂ ಹರಡಿತ್ತು.
ಇತ್ತೀಚಿನ ಘಟನೆ ಬರಿಯ ಮೂಢನಂಬಿಕೆ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ಸತ್ನಾದ ಸರ್ಕಾರಿ ಸ್ವಾಯತ್ತ ಸ್ನಾತಕೋತ್ತರ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ.ಪಿ.ಕೆ.ಮಿಶ್ರಾ ಅವರು ಮಾತನಾಡಿ, ವಿಗ್ರಹಗಳನ್ನು ಪೋರಸ್ ಕಲ್ಲುಗಳಿಂದ ಮಾಡಲಾಗಿದೆ. ವಿಗ್ರಹಗಳ ಮೇಲೆ ಶ್ರೀಗಂಧ, ಸಿಂಧೂರ ಮುಂತಾದವುಗಳನ್ನು ಲೇಪಿಸುವುದರಿಂದ, ಅವುಗಳ ಮೇಲೆ ನೀರು ಸುರಿದಾಗ, ಅದು ಕೆಲವೊಮ್ಮೆ ರಂಧ್ರಗಳಿಗೆ ಸೇರುತ್ತದೆ. ಮತ್ತು ಈ ರಂಧ್ರಗಳು ತುಂಬಿದಾಗ, ಬಣ್ಣದ ನೀರು ನಿಧಾನವಾಗಿ ಹರಿಯಲು ಪ್ರಾರಂಭಿಸುತ್ತದೆ ಎನ್ನಲಾಗಿದೆ.