ರಾಜಕೀಯ ನಾಯಕರ ರಂಗಿನಾಟದ ವಿಡಿಯೋಗಳು ಕಾಲಕಾಲಕ್ಕೆ ಹೊರಬರುತ್ತಿರುತ್ತವೆ. ಈಗ ಮಹಾರಾಷ್ಟ್ರದ ರಾಜಕಾರಣಿಯೊಬ್ಬರ ವಿಡಿಯೋ ವೈರಲ್ ಆಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ನಾಯಕರಿಗೆ ಸಂಬಂಧಿಸಿದ್ದಾಗಿದ್ದು, ಮಹಿಳೆಯು ಆತನನ್ನು “ಎಕ್ಸ್ಪೋಸ್” ಮಾಡುತ್ತಾರೆ.
ಐಷಾರಾಮಿ ಕೊಠಡಿಯ ಬೆಡ್ ಮೇಲೆ ರಾಜಕಾರಣಿ ಕುಳಿತಿದ್ದು, ಆ ಮಹಿಳೆಯು ಮೊಬೈಲ್ ಕ್ಯಾಮರಾದ ಆನ್ ಮಾಡಿ ಆತನ ಬಂಡವಾಳ ಬಿಚ್ಚಿಡುತ್ತಾಳೆ.
ತನ್ನ ಹೆಸರನ್ನು ಹೇಳಿಕೊಂಡು, ಇವನು ನನಗೆ ಮೋಸ ಮಾಡಿದ ವ್ಯಕ್ತಿ. ಅವನು ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಹೇಳುತ್ತಾಳೆ. ಆಕೆಯ ಕೊರಳಿನಲ್ಲಿ ಮಂಗಳಸೂತ್ರವೂ ಕಾಣಿಸುತ್ತದೆ.
ಈ ವೇಳೆ ಆತ ವಿಡಿಯೋ ಮಾಡದಂತೆ ಅಡ್ಡಿ ಮಾಡುತ್ತಾನೆ. ಆದರೆ ಆ ಮಹಿಳೆ, ಈಗ ನೋಡು…… ನಾನು ನಿನ್ನನ್ನು ಬಿಡುವುದಿಲ್ಲ. ನೀನು ನನಗೆ ಯಾಕೆ ಸುಳ್ಳು ಹೇಳಿದೆ? ಎಂದು ಪ್ರಶ್ನಿಸುತ್ತಾಳೆ. ಆಗ ಕ್ಯಾಮೆರಾ ಆಫ್ ಆಗುತ್ತದೆ. ಮಂಗಳವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.
https://twitter.com/TV9Marathi/status/1546875114851291137?ref_src=twsrc%5Etfw%7Ctwcamp%5Etweetembed%7Ctwterm%5E1546875114851291137%7Ctwgr%5E%7Ctwcon%5Es1_&ref_url=https%3A%2F%2Fwww.tv9marathi.com%2Fmaharashtra%2Fsolapur%2Fsolapur-political-leader-in-the-bedroom-video-made-viral-by-a-woman-au29-757142.html