ವಿಮಾನ ಪ್ರಯಾಣದ ವೇಳೆ ಎತ್ತರದಿಂದ ಕಾಣುವ ಭೂದೃಶ್ಯ ಕಣ್ಣಿಗೆ ಹಬ್ಬವಿದ್ದಂತೆ. ಅದರಲ್ಲೂ ರಾತ್ರಿ ಸಮಯ ಏರಿಯಲ್ ವ್ಯೂನಲ್ಲಿ ಕಾಣುವ ಭೂ ದೃಶ್ಯ ಮನಮೋಹಕವಾಗಿರುತ್ತದೆ. ಇತಹ ಅದ್ಭುತ ದೃಶ್ಯವನ್ನು ಕಾಕ್ ಪಿಟ್ ನಿಂದ ಸೆರೆಹಿಡಿದರೆ ಅದರ ನೋಟವಂತೂ ಇನ್ನೂ ಚೆಂದ. ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಮಾನವೊಂದು ಲ್ಯಾಂಡಿಂಗ್‌ಗಾಗಿ ಇಳಿಯುತ್ತಿದ್ದಂತೆ ರಾತ್ರಿಯ ಆಕಾಶದ ಅದ್ಭುತ ದೃಶ್ಯದ ವಿಡಿಯೋ ವೈರಲ್ ಆಗಿದೆ. ನ್ಯೂಸ್‌ವೀಕ್ ಪ್ರಕಾರ, ವಿಮಾನ ಲ್ಯಾಂಡಿಂಗ್ ಟರ್ಕಿಯಲ್ಲಿ ನಡೆದಿದೆ.
ವಿಡಿಯೋ ಕ್ಲಿಪ್ ಅನ್ನು ಮೂಲತಃ ಪೈಲಟ್ ಬೆಡ್ರೆಟಿನ್ ಸಾಗ್ಡಿಕ್ ಅವರು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಅದು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಇಸ್ತಾನ್‌ಬುಲ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುವುದನ್ನು ವೀಡಿಯೊ ಸೆರೆಹಿಡಿಯುತ್ತದೆ ಎಂದು ಪೈಲಟ್ ತಿಳಿಸಿದ್ದಾರೆ. ಬೆಡ್ರೆಟಿನ್ ಸಾಗ್ಡಿಕ್ ಅವರು ಪೈಲಟ್ ಆಗುವ ಮೊದಲು 16 ವರ್ಷಗಳ ಕಾಲ ಏರ್ ಟ್ರಾಫಿಕ್ ಕಂಟ್ರೋಲ್‌ನಲ್ಲಿ ಕೆಲಸ ಮಾಡಿದ್ದರಂತೆ.
ವಿಡಿಯೋದಲ್ಲಿ ವಿಮಾನವು ಮೋಡಗಳ ನಡುವೆ ಹಾರಾಡುತ್ತಾ ಇರುತ್ತದೆ. ಆಗಸದಿಂದ ಕೆಳಗೆ ಇಳಿಯುತ್ತಿದ್ದಂತೆ ರಾತ್ರಿ ವೇಳೆಯ ನಗರ ದೀಪಗಳಿಂದ ಮನಮೋಹಕವಾಗಿ ಕಾಣಿಸಿದೆ. ನಂತರ ವಿಮಾನ ಇಸ್ತಾನ್‌ಬುಲ್ ಏರ್‌ಪೋರ್ಟ್‌ನಲ್ಲಿ ಅಂತಿಮವಾಗಿ ರನ್‌ವೇ ನಲ್ಲಿ ಇಳಿಯುತ್ತದೆ.
ಯುಎಸ್ ನ್ಯೂಸ್‌ನ ವಾರ್ಷಿಕ ಶ್ರೇಯಾಂಕದ 2023 ರ ಆವೃತ್ತಿಯಲ್ಲಿ ಪೈಲಟ್ ವೃತ್ತಿಯು “100 ಅತ್ಯುತ್ತಮ ಉದ್ಯೋಗಗಳಲ್ಲಿ” ಸ್ಥಾನ ಪಡೆದಿರುವ ಕಾರಣ ಈ ವಿಡಿಯೋ ವೈರಲ್ ಆಗಿದೆ.