
ನಾಯಿಗಳ ಬಗ್ಗೆ ಹೇಳಿದಷ್ಟೂ ಕಮ್ಮಿಯೇ. ಅದರಲ್ಲಿಯೂ ಇತ್ತೀಚಿಗೆ ಹೆಚ್ಚು ವೈರಲ್ ಆಗುತ್ತಿರುವ ಪ್ರಾಣಿ ಎಂದರೆ ಅದು ನಾಯಿ. ತನ್ನ ಮಾಲೀಕ ಹೇಳಿದಂತೆ ಕೇಳುವ ಕ್ಯೂಟ್ ಎನಿಸುವ ಹಲವಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅಂಥದ್ದೇ ಒಂದು ವಿಡಿಯೋ ಅನ್ನು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಶೇರ್ ಮಾಡಿದ್ದಾರೆ.
ನಾಯಿ ಮತ್ತು ಅದರ ಮಾಲೀಕರ ವಿಡಿಯೋ ಇದಾಗಿದೆ. ತನ್ನ ಮಾಲೀಕನ ಜತೆ ಜಾಗಿಂಗ್ಗೆ ಹೋಗಿರುವ ನಾಯಿ, ಮಾಲೀಕನನ್ನೇ ಅನುಸರಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಜಾಗಿಂಗ್ ರೀತಿಯಲ್ಲಿಅವರು ಬೇಕಂತೆಲೇ ಜಿಗಿದು ಜಿಗಿದು ಹೋಗುತ್ತಿದ್ದು, ನಾಯಿ ಕೂಡ ಅವರನ್ನೇ ಹಿಂಬಾಲಿಸುತ್ತಾ ತಾನೂ ಜಿಗಿದು ಜಿಗಿದು ಹೋಗುತ್ತಿರುವ ವಿಡಿಯೋ ಇದಾಗಿದೆ. ಒಂಟಿ ಕಾಲಿನಲ್ಲಿ ಜಿಗಿಯುವುದನ್ನು ನೋಡಿದ ನಾಯಿ, ತಾನೂ ಥೇಟ್ ಹಾಗೆಯೇ ಮಾಡಿರುವುದು ನೆಟ್ಟಿಗರ ಮನಸ್ಸು ಗೆದ್ದಿದೆ. ಥರಹೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.