ಪ್ರಾಣಿ-ಪಕ್ಷಿ ಲೋಕವೇ ಕುತೂಹಲವಾದದ್ದು. ಪ್ರಾಣಿಗಳು ಬದುಕಲು ಒಂದನ್ನೊಂದು ಅವಲಂಬಿಸುತ್ತವೆ ಆದರೆ ಆಗಾಗ್ಗೆ ಅವುಗಳು ಪರಸ್ಪರ ಸಹಾಯ ಮಾಡುವುದನ್ನು ಮತ್ತು ಇತರ ಜಾತಿಗಳೊಂದಿಗೆ ಬಾಂಧವ್ಯವನ್ನು ಸಹ ಕಾಣಬಹುದು.
ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಕುತೂಹಲದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಎರಡು ಜಿಂಕೆಗಳು ಮರದ ಕೊಂಬೆಯಿಂದ ಎಲೆಗಳನ್ನು ತಿನ್ನಲು ಕೋತಿಯೊಂದು ಸಹಾಯ ಮಾಡುವುದನ್ನು ನೋಡಬಹುದು. ಜಿಂಕೆ ಮರದ ಎಲೆಗಳನ್ನು ತಿನ್ನಲು ಕಷ್ಟ ಪಡುತ್ತಿರುವಾಗ ಕೋತಿಯೊಂದು ಟೊಂಗೆಯನ್ನು ಕೆಳಕ್ಕೆ ಮಾಡಿ ಜಿಂಕೆಗೆ ಅದನ್ನು ತಿನ್ನಲು ಸಹಾಯ ಮಾಡುವ ವಿಡಿಯೋ ಇದಾಗಿದೆ.
ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಾಣಿಗಳು ಮನುಷ್ಯನಿಗಿಂತ ಭಿನ್ನ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಎಂದಿದ್ದಾರೆ.