ಜಂಗಲ್ ಸಫಾರಿಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ ಮತ್ತು ಪ್ರವಾಸಿಗರು ಹುಲಿ ನೋಡಬೇಕು ಎಂದು ಬಯಸುವುದು ಸಹಜ. ರಾಷ್ಟ್ರೀಯ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬರು ಸ್ಮಾರ್ಟ್ಫೋನ್ನಲ್ಲಿ ಹುಲಿಯ ಚಿತ್ರ ಸೆರೆಹಿಡಿಯಲು ಅದರ ಹಿಂದೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ “ಸ್ಟಂಟ್” ನೆಟ್ಟಿಗರನ್ನು ಕೆರಳಿಸಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 8 ಸೆಕೆಂಡುಗಳ ಕ್ಲಿಪ್‌ನಲ್ಲಿ, ಜಂಗಲ್ ಸಫಾರಿಯಲ್ಲಿ ವ್ಯಕ್ತಿಯೊಬ್ಬರು ಕೈಯಲ್ಲಿ ಫೋನ್ ಹಿಡಿದುಕೊಂಡು ಹುಲಿಯನ್ನು ಬೆನ್ನಟ್ಟುವುದನ್ನು ಕಾಣಬಹುದು. ಇತರ ಪ್ರವಾಸಿಗರು ಜೀಪಿನಿಂದ ಕಾಡು ಪ್ರಾಣಿಗಳ ಚಿತ್ರಗಳನ್ನು ಕ್ಲಿಕ್ಕಿಸುವುದನ್ನು ಕಾಣಬಹುದು.
ಇದು ವೈರಲ್ ಆಗುತ್ತಿದೆ. ಇಂಥ ಕೃತ್ಯ ತುಂಬಾ ತಪ್ಪು ಎಂದು ಅಧಿಕಾರಿ ಹೇಳಿದ್ದಾರೆ. ಕೆಲವು ಮೂರ್ಖರ ಇಂತಹ ಕೃತ್ಯಗಳು ಕೆಟ್ಟ ಹೆಸರನ್ನು ತರುತ್ತವೆ. ದಯವಿಟ್ಟು ಇಂತಹ ಮೂರ್ಖತನದ ಕೃತ್ಯಗಳಿಂದ ದೂರವಿರಿ ಮತ್ತು ನಿಮ್ಮ ಸ್ನೇಹಿತರನ್ನು ಸಂವೇದನಾಶೀಲರಾಗಿಸಿ ಎಂದು ಅವರು ಬರೆದಿದ್ದಾರೆ. ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಜೀವಕ್ಕೆ ಅಪಾಯ ಎಂದಿದ್ದಾರೆ.