ಲೆಲ್ಯಾಂಡ್ ನಿಸ್ಕಿ ಎಂಬ ಪರ್ವತಾರೋಹಿ ಅತ್ಯಂತ ಕಿರಿದಾದ ಪರ್ವತ ಶಿಖರದ ಮೇಲೆ ನಡೆಯುವ ಸಾಹಸದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದ ಸ್ಥಳವು ವಾಷಿಂಗ್ಟನ್ ಸ್ಟೇಟ್ನ ನಾರ್ತ್ ಕ್ಯಾಸ್ಕೇಡ್ಸ್ ರಾಷ್ಟ್ರೀಯ ಉದ್ಯಾನವನದ ಶಿಖರವಾಗಿದೆ. ಲೆಲ್ಯಾಂಡ್ ನಿಸ್ಕಿ ಅವರು ಸೆಪ್ಟೆಂಬರ್ 2ರಂದು ಇನ್ಸ್ಟಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಪರ್ವತದ ತುಟ್ಟತುದಿಯ ಮೇಲಿನ ಕಿರಿದಾದ ಪ್ರದೇಶದಲ್ಲಿ ನಡೆಯುವುದನ್ನು ಕಾಣಬಹುದು. ಅಲ್ಲಿ ಕಾಲುದಾರಿ ಸಹ ಇಲ್ಲ. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಲ್ಲಿ ಇಡಬೇಕಾದಂತಿದೆ. ಸ್ವಲ್ಪ ಆಯತಪ್ಪಿದರೂ ಪ್ರಪಾತಕ್ಕೆ ಬೀಳುವುದು ಖಚಿತ. ಆತ ಕೇವಲ ಹೆಲ್ಮೆಟ್ ಧರಿಸಿದ್ದು, ಸಣ್ಣದೊಂದು ಬ್ಯಾಗ್ ಸಹ ಕಾಣಿಸುತ್ತದೆ.
ನಾನು ಕೆಲವು ಸೂಪರ್ ಎಕ್ಸ್ಪೋಸ್ಟ್ ಥಿನ್ ರಿಡ್ಜ್ ಕ್ಲೈಂಬಿಂಗ್ ಪ್ರೀತಿಸುತ್ತೇನೆ. ಒಂದೆರಡು ದಿನಗಳ ಹಿಂದೆ ಬೋಸ್ಟನ್ ಜಲಾನಯನ ಪ್ರದೇಶಕ್ಕೆ ಬಂದಿದ್ದೇನೆ, ಕ್ಯಾಸ್ಕೇಡ್ಗಳ ಸುತ್ತಲಿನ ಎಲ್ಲಾ ನಂಬಲಾಗದ ಪ್ರದೇಶಗಳಿಂದ ಆಶ್ಚರ್ಯಚಕಿತನಾಗಿದ್ದೇನೆ ಎಂದು ಅವರು ವಿವರಿಸಿದ್ದಾರೆ.