alex Certify ಈ ಕಂಪನಿಯಲ್ಲಿ ಆಟಿಕೆಗಳೊಂದಿಗೆ ಆಟವಾಡಿದರೂ ಸಿಗುತ್ತೆ ಸಂಬಳ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಂಪನಿಯಲ್ಲಿ ಆಟಿಕೆಗಳೊಂದಿಗೆ ಆಟವಾಡಿದರೂ ಸಿಗುತ್ತೆ ಸಂಬಳ..!

ಆಟಿಕೆ ಸಾಮಗ್ರಿಗಳಲ್ಲಿ ಆಟವಾಡುವ ಮಕ್ಕಳನ್ನು ನೋಡಿರುತ್ತೀರಿ. ಆದರೆ ಆಟಿಕೆ ಸಾಮಗ್ರಿಗಳಲ್ಲಿ ಆಟವಾಡುವುದಕ್ಕೆ ನಿಮಗೆ ಸಂಬಳ ಸಿಗುತ್ತೆ ಎಂದರೆ ನೀವು ನಂಬುತ್ತೀರೇ.? ಸೋಶಿಯಲ್​ ಮೀಡಿಯಾದಲ್ಲಿ ಇಂತಹದ್ದೊಂದು ವಿಡಿಯೋ ವೈರಲ್​ ಆಗಿದ್ದು ವ್ಯಕ್ತಿಯೊಬ್ಬ ಆಟಿಕೆಗಳ ಜೊತೆ ಆಟವಾಡಿ ಅದನ್ನು ಪರೀಕ್ಷೆ ಮಾಡುತ್ತಿರುವ ಕೆಲಸ ಕಂಡು ನೆಟ್ಟಿಗರು ಇಂತಹ ಉದ್ಯೋಗವೂ ಇರುತ್ತಾ ಎಂದು ಹುಬ್ಬೇರಿಸಿದ್ದಾರೆ.

ಈ ವಿಡಿಯೋದಲ್ಲಿ ಫ್ಯಾಕ್ಟರಿಯಲ್ಲಿ ನೀಲಿ ಬಣ್ಣದ ಉಡುಪನ್ನು ಧರಿಸಿ ಕುಳಿತ ಅನೇಕ ಕೆಲಸಗಾರರು ಮಿನಿಯನ್ಸ್​ ಆಟಿಕೆಯನ್ನು ಪರೀಕ್ಷೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದೇ ಸಾಲಿನ ಕೊನೆಯಲ್ಲಿ ಕುಳಿತ ಕೆಲಸಗಾರನೊಬ್ಬ ಪ್ರತಿಯೊಂದು ಆಟಿಕೆಯನ್ನು ಮುಟ್ಟಿ ನೋಡಿ ಅದು ಕಂಪನಿಯ ಗುಣಮಟ್ಟಕ್ಕೆ ತಕ್ಕದಾಗಿದೆಯಾ ಎಂಬುದನ್ನು ಪರೀಕ್ಷೆ ಮಾಡುತ್ತಿದ್ದಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ಕೆಲಸವನ್ನು ಒಮ್ಮೆ ಮಾಡುವುದು ಅತ್ಯಂತ ಸುಲಭ. ಆದರೆ ಇದೇ ಕೆಲಸವನ್ನು ಸಾವಿರ ಬಾರಿ ಮಾಡುವುದು ಅಂದರೆ ಇದಕ್ಕಿಂತ ಕಷ್ಟದ ಕೆಲಸ ಇನ್ನೊಂದು ಇರಲಿಕ್ಕಿಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು ಬೆಳಗ್ಗೆಯಿಂದ ಸಂಜೆವರೆಗೆ ಈ ರೀತಿ ಕೆಲಸ ಮಾಡೋದಕ್ಕೆ ಬೋರ್​ ಅನಿಸಲ್ವೇ ಎಂದು ಪ್ರಶ್ನೆ ಮಾಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...