alex Certify ಪುಟ್ಟ ಹುಡುಗಿಯ ಬೇಡಿಕೆ ಕೇಳಿ ಮಹಿಳಾ ಪೊಲೀಸ್‌ ಪೇದೆಗೆ ನಗುವೋ ನಗು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಹುಡುಗಿಯ ಬೇಡಿಕೆ ಕೇಳಿ ಮಹಿಳಾ ಪೊಲೀಸ್‌ ಪೇದೆಗೆ ನಗುವೋ ನಗು…!

ರಸ್ತೆಯ ಬದಿಯಲ್ಲಿ ಕರ್ತವ್ಯ ನಿರತ ಪೊಲೀಸ್​ ಸಿಬ್ಬಂದಿ ಮುಂದೆ ಕಾಣಿಸಿಕೊಂಡ ಪುಟ್ಟ ಮಗು ಲಾಠಿಯನ್ನು ಕೇಳುವ ವಿಡಿಯೋ ಒಂದು ವೈರಲ್​ ಆಗಿದೆ.

ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಕನಿಷ್ಕಾ ಬಿಷ್ಣೋಯ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ವಿಡಿಯೋ ಕ್ಲಿಪ್​ 8 ಮಿಲಿಯನ್​ ವೀಕ್ಷಣೆ ಗಳಿಸಿದೆ.

ಬಯೋ ಪ್ರಕಾರ, ಕಾನಿಷ್ಕಾಗೆ 21 ತಿಂಗಳು. ಆ ಹುಡುಗಿ ಮಹಿಳಾ ಪೊಲೀಸ್​ ಸಿಬ್ಬಂದಿ ಮುಂದೆ ಲಾಠಿಗಾಗಿ ಬೇಡಿಕೆ ಇಡುವುದನ್ನು ಕಾಣಬಹುದು. ಪೊಲೀಸ್​ ಸಿಬ್ಬಂದಿಗೋ ನಗುವೋ ನಗು ಮತ್ತು ತಮಾಷೆಯನ್ನು ಬಹಳಷ್ಟು ಆನಂದಿಸಿದರು. ಶೀರ್ಷಿಕೆಯ ಪ್ರಕಾರ ಈ ಘಟನೆ ಮುಂಬೈನಲ್ಲಿ ನಡೆದಿದೆ.

ಇದನ್ನು ವೀಕ್ಷಿಸಿದ ನೆಟ್ಟಿಗರು ಮನಸೂರೆಗೊಂಡಿರುವುದು ಅವರ ಅಭಿಪ್ರಾಯಗಳಲ್ಲೇ ಕಂಡುಬರುತ್ತಿದೆ, ಮಗುವಿನ ಮುದ್ದುತನಕ್ಕೆ ಫಿದಾ ಆಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...