ಪೂರ್ವ ಆಫ್ರಿಕಾದ ಕೀನ್ಯಾದ ಮಸಾಯ್ ಮಾರಾದಲ್ಲಿ ದೈತ್ಯ ಗಂಡು ಸಿಂಹ ಈಗ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದೆ. ಇದಕ್ಕೆ ಕಾರಣ ಅದರ ಕುತ್ತಿಗೆ ಹಾಗೂ ಮೈಮೇಲೆ ಇರುವ ದೈತ್ಯಾಕಾರದ ಕೂದಲು.
ಇದರ ವಿಡಿಯೋ ವೈರಲ್ ಆಗುತ್ತಿದೆ. ಈ ಗಂಡು ಸಿಂಹದ ಮೃದುವಾಗಿರುವ ಸುಂದರ ಕೂದಲನ್ನು ನೋಡುವುದೇ ಅಂದ. ಅದು ಗಾಳಿಯಲ್ಲಿ ತೂಗಾಡುತ್ತಿರುವಾಗ ಅದರ ಸೌಂದರ್ಯ ಆಸ್ವಾದಿಸುವುದೇ ಭವ್ಯವಾಗಿದೆ. ಸಿಂಹವು ಬಿಸಿಲಿನಲ್ಲಿ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದಂತೆಯೇ ಕಾಣಿಸುತ್ತಿದ್ದು, ಅದರ ನುಣುಪಾದ ರೇಷ್ಮೆಯ ಕೇಸರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಟ್ವಿಟರ್‌ನಲ್ಲಿ ಈ ಸಿಂಹದ ಸೌಂದರ್ಯ 7 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ರೇಷ್ಮೆ ಕೂದಲು ಹೊಂದಿರುವ ಸುಂದರ ಹುಡುಗಿಯಂತೆ ಈ ಗಂಡುಸಿಂಹ ತೋರುತ್ತಿದೆ ಎಂದು ಹಲವರು ಹೇಳಿದ್ದಾರೆ.