ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋ ಮತ್ತು ಚಿತ್ರಗಳು ಹೆಚ್ಚು ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಪರಭಕ್ಷಕ ಮತ್ತು ಬೇಟೆಯನ್ನು ಒಳಗೊಂಡಿರುವವು ಹೆಚ್ಚು.
ಇದೀಗ ಕಿಲ್ಲರ್ ವೇಲ್ಗಳು ಪರಸ್ಪರರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸುತ್ತಿರುವುದನ್ನು ತೋರಿಸುವ ದೃಶ್ಯಗಳು ಹೊರಬಂದಿವೆ. ಯುನೈಟೆಡ್ ಸ್ಟೇಟ್ಸ್ ಸ್ಯಾನ್ ಡಿಯಾಗೋ ಅಕ್ವಾಟಿಕ್ ಪಾರ್ಕ್ನಲ್ಲಿ ಸಂದರ್ಶಕರೊಬ್ಬರು ಈ ಭಯಾನಕ ವಿಡಿಯೊವನ್ನು ಸೆರೆಹಿಡಿದಿದ್ದಾರೆ.
ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ನ ಅಧಿಕೃತ ಟ್ವಿಟ್ಟರ್ ಖಾತೆಯು ವಿಡಿಯೋ ಹಂಚಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ. ಎರಡು ಓರ್ಕಾಗಳ ನಡುವಿನ ಹಿಂಸಾಚಾರವು “ಪ್ರಕೃತಿಯಲ್ಲಿ ಅಸಾಮಾನ್ಯವಾಗಿದೆ’ ಕಾಣಿಸಿದೆ.
ವಿಡಿಯೊವು ಸೀವರ್ಲ್ಡ್ನಲ್ಲಿ ಎರಡು ಓರ್ಕಾಗಳು ಪರಸ್ಪರ ದಾಳಿ ಮಾಡುವುದನ್ನು ತೋರಿಸುತ್ತದೆ, ಒಂದು ಹಂತದಲ್ಲಿ, ಅಲ್ಲಿದ್ದ ಮಗು ಚೀರುವುದನ್ನೂ ಮತ್ತು ಕೆಲವು ಅಭಿಪ್ರಾಯ ಹೇಳುವುದನ್ನು ಕೇಳಬಹುದು. ಒರ್ಕಾ ಇನ್ನೂ ಹೇಗೆ ಜೀವಂತವಾಗಿದೆ? ಅವು ಪರಸ್ಪರ ಜಗಳವಾಡುವುದಿಲ್ಲ, ಪರಸ್ಪರ ಸಹಾಯ ಮಾಡುತ್ತವೆ ಎಂದು ನಾನು ಭಾವಿಸಿದ್ದೆ ಎಂದು ಮಗು ಹೇಳುತ್ತದೆ.
ವರದಿಯ ಪ್ರಕಾರ ಈ ಘಟನೆಯು ಆಗಸ್ಟ್ 5ರಂದು ನಡೆದಿದೆ. ಗಾಯಗೊಂಡ ಓರ್ಕಾ ದಾಳಿಕೋರನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ತೋರುತ್ತದೆ, ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ.
ಸೀ ವರ್ಲ್ಡ್ ವಿರುದ್ಧ ಪೇಟಾ ಕೃಷಿ ಇಲಾಖೆಗೆ ದೂರು ಸಲ್ಲಿಸಿದೆ. ಇದನ್ನು “ಅಬ್ಯೂಸ್ಮೆಂಟ್ ಪಾರ್ಕ್’ ಎಂದು ಸಹ ಕರೆದಿದೆ.
ಪ್ರತ್ಯಕ್ಷದಶಿರ್ಯೊಬ್ಬರು ಹೇಳಿರುವಂತೆ “ನಾವು ತಿಮಿಂಗಿಲದ ಬದಿಯಲ್ಲಿ ಕಚ್ಚುವಿಕೆಯ ಗುರುತು ನೋಡಿದ್ದೇವೆ. ಪ್ರತಿ ಎರಡು ಸೆಕೆಂಡ್ಗಳಿಗೆ ಇನ್ನೂ ಎರಡು ಓರ್ಕಾಗಳು ನೀರಿನಿಂದ ಹಾರಿ ಗಾಯಗೊಂಡ ಓರ್ಕಾದ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದ್ದವು ಎಂದಿದ್ದಾರೆ.