ನೀವು ಚಹಾ ಪ್ರಿಯರಾಗಿದ್ದರೆ, ನಿಮಗಾಗಿ ಒಂದು ಅದ್ಭುತ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಅದು ಖಂಡಿತಾ ನಿಮ್ಮ ಹೃದಯ ಗೆಲ್ಲಬಹುದು. ಹಾಸ್ಯನಟ ಕೆನ್ನಿ ಸೆಬಾಸ್ಟಿಯನ್ ಅವರು ಪರಿಪೂರ್ಣವಾದ ಚಹಾವನ್ನು ತಯಾರಿಸುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹೌದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕೆನ್ನಿ ಸೆಬಾಸ್ಟಿಯನ್ ಅವರು ಚಹಾ ಮಾಡಲು, ಒಂದು ಕಪ್ ನೀರನ್ನು ಅಳೆದು ಅದನ್ನು ಲೋಹದ ಬೋಗುಣಿಗೆ ಸುರಿದಿದ್ದಾರೆ. ನಂತರ ಅದಕ್ಕೆ ಕರಗಿದ ಶುಂಠಿ ಮತ್ತು ಏಲಕ್ಕಿಯನ್ನು ಸೇರಿಸಲು ಮುಂದಾಗಿದ್ದಾರೆ. ನಂತರ, ಅವರು ಒಂದು ಕಪ್ ಹಾಲು ಸೇರಿಸಿ ಮತ್ತಷ್ಟು ಕುದಿಸಿದ್ದಾರೆ.
ಕೆನ್ನಿ ನಂತರ ಕಪ್ ಮೇಲೆ ಸ್ಟ್ರೈನರ್ ಹಾಕಿ ಮತ್ತು ಉತ್ಸಾಹದಿಂದ ಚಹಾವನ್ನು ಸುರಿದಿದ್ದಾರೆ. ಈ ವೇಳೆ ಅವರು ಒಂದು ಸಿಪ್ ಚಹಾ ಆಸ್ವಾದಿಸಿದ್ದಾರೆ. ಒಂದು ಚಾಯ್ ಕಥೆ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ನಿಸ್ಸಂಶಯವಾಗಿ ಎಲ್ಲಾ ಚಾಯ್ ಪ್ರಿಯರನ್ನು ಆಕರ್ಷಿಸಿದೆ. ಹಾಗೂ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕಾಮೆಂಟ್ಗಳ ವಿಭಾಗವು ನೆಟ್ಟಿಗರ ಟನ್ಗಟ್ಟಲೆ ಪ್ರತಿಕ್ರಿಯೆಗಳಿಂದ ತುಂಬಿವೆ.