ಟರ್ಕಿ: ರೋಗಿಗಳು ಒಬ್ಬರೇ ಆಸ್ಪತ್ರೆಗಳಿಗೆ ಬರುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಗಾಯಗೊಂಡ ಬೆಕ್ಕು ಆಸ್ಪತ್ರೆಗೆ ಏಕಾಂಗಿಯಾಗಿ ಬಂದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಟರ್ಕಿಯ ಸಾರ್ವಜನಿಕ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ತತ್ವಾನ್ ನಗರದ ಬಿಟ್ಲಿಸ್ ಜಿಲ್ಲೆಯ ಆಸ್ಪತ್ರೆಗೆ ಗಾಯಗೊಂಡ ಬೆಕ್ಕು ಭೇಟಿ ನೀಡಿದ್ದು, ಇದರ ಕುರಿತು ಆಸ್ಪತ್ರೆಯು ವಿಡಿಯೋ ಒಂದನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದೆ.
ಕಪ್ಪು ಮತ್ತು ಬಿಳಿ ಬೆಕ್ಕು ಕುಂಟುತ್ತಾ ನಡೆದು ವೈದ್ಯಕೀಯ ಸೌಲಭ್ಯದ ಆವರಣವನ್ನು ಪ್ರವೇಶಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಗಾಯಗೊಂಡ ಬೆಕ್ಕು ವೈದ್ಯಕೀಯ ಸಹಾಯವನ್ನು ಕೋರಿ ಕಾರಿಡಾರ್‌ನಲ್ಲಿ ಮೊದಲು ಅಲೆದಾಡಿದೆ. ಕರ್ತವ್ಯದಲ್ಲಿದ್ದ ನರ್ಸ್ ಬೆಕ್ಕನ್ನು ನೋಡಿದರು ಮತ್ತು ತಕ್ಷಣವೇ ಅದಕ್ಕೆ ಸಹಾಯ ಮಾಡಲು ಧಾವಿಸಿದರು.
ನಂತರ ಬೆಕ್ಕನ್ನು ಒಂದು ಕಡೆ ಮಲಗಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಗೊಂಡ ಭಾಗಕ್ಕೆ ಬ್ಯಾಂಡೇಜ್ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.