ಟೆಟ್ರಾ ಪ್ಯಾಕ್‌ಗಳಲ್ಲಿ ಮಾರಾಟವಾಗುವ ಮಾವಿನ ಹಣ್ಣಿನ ರಸವನ್ನು ಹಲವರು ಸೇವಿಸುತ್ತಾರೆ. ಅವುಗಳ ತಯಾರಿಕೆಯ ಪ್ರಕ್ರಿಯೆಯು ಎಷ್ಟು ಕೆಟ್ಟದಾಗಿರುತ್ತದೆ ಎಂಬುದನ್ನು ತೋರಿಸುವ ವಿಡಿಯೋವೊಂದು ಹುಬ್ಬೇರಿಸುವಂತೆ ಮಾಡಿದೆ.
ಕಂಟೆಂಟ್ ಕ್ರಿಯೇಟರ್ ಒಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ, ಕೆಲಸಗಾರನೊಬ್ಬ ಬಕೆಟ್ ನಲ್ಲಿ ತುಂಬಿದ ಮಾವಿನ ರಸವನ್ನು ಪಾತ್ರೆಯಲ್ಲಿ ಸುರಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದಾಗ ಇದು ಮಾವಿನ ರಸವಲ್ಲ ಬದಲಾಗಿ ಕೃತಕ ಬಣ್ಣ ಎಂದು ಎಂಬುದು ಗೊತ್ತಾಗುತ್ತದೆ.
ನಂತರ ಕೆಲಸಗಾರರು ಅನೇಕ ಇತರ ಪದಾರ್ಥಗಳನ್ನು ಮಿಶ್ರಣ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಬಣ್ಣ ಮತ್ತು ಬಿಳಿ ಪುಡಿಯನ್ನು ಅದಕ್ಕೆ ಸೇರಿಸುತ್ತಾರೆ. ಇಷ್ಟೇ ಅಲ್ಲದೇ ಕೆಲಸಗಾರರು ನೈರ್ಮಲ್ಯವನ್ನು ಗಾಳಿಗೆ ತೂರಿದಂತೆ ಕೈಗೆ ಗ್ಲೌಸ್ ಧರಿಸದೇ ಕೇವಲ ಬರಿ ಕೈಗಳಿಂದ ಪದಾರ್ಥಗಳನ್ನು ಮಿಶ್ರಣ ಮಾಡುತ್ತಾರೆ. ಹೀಗಾಗಿ ಟೆಟ್ರಾ ಪ್ಯಾಕ್ ಜ್ಯೂಸ್‌ಗಳಲ್ಲಿನ ಸೋಂಕಿನ ಬಗ್ಗೆ ಕಳವಳ ಹೆಚ್ಚುತ್ತದೆ.
ಜ್ಯೂಸ್ ಪ್ಯಾಕ್ ಮಾಡಿದ ನಂತರ ಅವುಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಕೊನೆಯಲ್ಲಿ ಟೇಪ್‌ನಿಂದ ಮುಚ್ಚಲಾಯಿತು. ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಚಿಲ್ಲರೆ ವ್ಯಾಪಾರಿಗಳಿಗೆ ನೀಡಲಾಗುತ್ತದೆ. ಮಾವಿನಹಣ್ಣಿನ ರಸ ತಯಾರಾಗುವ ಕ್ರಿಯೆಯ ಈ ಕ್ಲಿಪ್ 5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು ಗ್ರಾಹಕರನ್ನು ಬೆಚ್ಚಿಬೀಳಿಸಿದೆ.
https://www.youtube.com/watch?v=7B9NaHgBBrI