alex Certify ಅಳಿಯನಿಗೆ ಕಾಡಿಗೆ​ ಹಚ್ಚಿ ಮೇಕಪ್​: ಹೀಗೊಂದು ವಿಶಿಷ್ಟ ಮದುವೆ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿಯನಿಗೆ ಕಾಡಿಗೆ​ ಹಚ್ಚಿ ಮೇಕಪ್​: ಹೀಗೊಂದು ವಿಶಿಷ್ಟ ಮದುವೆ ಆಚರಣೆ

ಮದುವೆ ಸಂಪ್ರದಾಯಬದ್ದ ಆಚರಣೆಗಳಲ್ಲಿ ಒಂದಾಗಿದೆ. ಅದಕ್ಕೆ ಸಂಬಂಧಿಸಿದ ವಿವಿಧ ಪದ್ಧತಿಗಳು ಮತ್ತು ಆಚರಣೆಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತವೆ. ಮದುವೆ ಸಮಾರಂಭದ ಕೆಲವು ಆಚರಣೆಗಳು ನಮಗೆ ಆರಾಧ್ಯ ಭಾವನೆಯನ್ನು ನೀಡಿದರೆ ಕೆಲವು ನಮ್ಮನ್ನು ಅತ್ಯಂತ ಆಶ್ಚರ್ಯಗೊಳಿಸುತ್ತದೆ.

ಅಂಥದ್ದೇಒಂದು ವಿಚಿತ್ರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ವರನು ತನ್ನ ಅತ್ತೆಯ ಮನೆಯಲ್ಲಿ ಅಸಾಮಾನ್ಯ ಮೇಕಪ್ ಚಿಕಿತ್ಸೆಗೆ ಒಳಗಾಗುತ್ತಿರುವುದನ್ನು ನೋಡಬಹುದು.

ವೀಡಿಯೊದಲ್ಲಿ, ವಧುವಿನ ತಾಯಿಯು ವರನ ಮುಖದ ಮೇಲೆ ಕಾಡಿಗೆ (ಕಾಜಲ್) ಮತ್ತು ಅವನ ತಲೆಯ ಮೇಲೆ ಹೇರ್ ಆಯಿಲ್ ಮೆತ್ತುವುದನ್ನು ನೋಡಬಹುದು. ಕಾಡಿಗೆಯನ್ನು ವರನ ಕೆನ್ನೆ, ಕಣ್ಣುಗಳು ಮತ್ತು ಮೇಲಿನ ತುಟಿಯ ಮೇಲೆ ಹಾಕುವುದನ್ನು ನೋಡಬಹುದು. ನಂತರ ಅಳಿಯನಿಗೆ ಎಣ್ಣೆಯಿಂದ ಸ್ನಾನ ಮಾಡಿಸಲಾಗಿದೆ.

ಅಷ್ಟೇ ಅಲ್ಲದೇ ಅಳಿಯನಿಗೆ ಲಿಪ್ ಸ್ಟಿಕ್ ಮತ್ತು ಪೌಡರ್ ಕೂಡ ಹಚ್ಚಲಾಗಿತ್ತು. ಈ ವೀಡಿಯೋ ಇದುವರೆಗೆ 4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವೈರಲ್ ವೀಡಿಯೊಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.

https://youtu.be/-P5OTUNUJRo

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...