ಬೆಂಗಳೂರು: ಭಾರತೀಯ ಆಟ ಹಾಕಿ ಆದರೂ, ಹಲವರ ಹೃದಯದಲ್ಲಿ ನೆಲೆಸಿರುವುದು ಕ್ರಿಕೆಟ್. ಕ್ರಿಕೆಟ್ ಪ್ರೇಮಿಗಳೇ ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ. ನೀವು ಯಾವ ಆಟ ಇಷ್ಟಪಡುತ್ತೀರಿ ಎಂದು ಕೇಳಿದರೆ ಹಲವರು ಹೇಳುವುದು ಕ್ರಿಕೆಟ್ ಎಂದು. ಇದಕ್ಕಾಗಿಯೇ ಹಾದಿ, ಬೀದಿ, ಟೆರೇಸ್ಗಳ ಮೇಲೆ ಮಕ್ಕಳಿಂದ ಹಿಡಿದು ದೊಡ್ಡವರೆಲ್ಲರೂ ಕ್ರಿಕೆಟ್ ಆಡುವುದೇ ಹೆಚ್ಚು. ಈ ಆಟದ ಬಗ್ಗೆ ಅಷ್ಟು ಭಾವನಾತ್ಮಕ ಸಂಬಂಧವನ್ನು ಜನರು ಹೊಂದಿದ್ದಾರೆ.
ಇದರ ಹುಚ್ಚು ಜರ್ಮನ್ ಕಾನ್ಸುಲ್‌ಗಳನ್ನೂ ಬಿಟ್ಟಿಲ್ಲ. ಈ ವಿಡಿಯೋ ಬೆಂಗಳೂರಿನಲ್ಲಿ ತೆಗೆಯಲಾಗಿದೆ. ಬೆಂಗಳೂರಿನಲ್ಲಿ ತಮ್ಮ ಊಟದ ವಿರಾಮದ ಸಮಯದಲ್ಲಿ ಜರ್ಮನ್ ಕಾನ್ಸುಲ್‌ಗಳಿಗೆ ಕ್ರಿಕೆಟ್ ಕಲಿಸುವ ಜವಾಬ್ದಾರಿಯನ್ನು ಭಾರತೀಯ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಅಧಿಕಾರಿಗಳು ಕಾನ್ಸುಲೇಟ್‌ನಲ್ಲಿಯೇ ಆಟವನ್ನು ಕಲಿಸಿದ್ದಾರೆ. ಇದು ಕ್ರಿಕೆಟ್‌ನ ಬಗ್ಗೆ ಅವರ ಅಪಾರ ಪ್ರೀತಿ ಮತ್ತು ಸಮರ್ಪಣೆಯನ್ನು ತೋರಿಸುತ್ತದೆ. ಕೆಲಸದಿಂದ ಬಿಡುವು ಸಿಕ್ಕಾಗ ಜರ್ಮನ್ನರು ಸಹ ಕಚೇರಿಯಲ್ಲಿ ಮೋಜಿನ ಸಮಯವನ್ನು ಆನಂದಿಸುತ್ತಾರೆ ಎನ್ನುವುದನ್ನು ತೋರಿಸುತ್ತದೆ.
ಬೆಂಗಳೂರಿನಲ್ಲಿ ಕೇರಳ ಮತ್ತು ಕರ್ನಾಟಕದ ಜರ್ಮನ್ ಕಾನ್ಸುಲ್ ಆಗಿರುವ ಅಚಿಮ್ ಬುರ್ಕಾರ್ಟ್, ಇಬ್ಬರು ಭಾರತೀಯ ಅಧಿಕಾರಿಗಳು ಎಡಗೈ ವಿದೇಶಿ ಬ್ಯಾಟ್ಸ್‌ಮನ್‌ಗೆ ಒಬ್ಬೊಬ್ಬರಾಗಿ ಬೌಲಿಂಗ್ ಮಾಡುವ ವಿಡಿಯೋ ಇದಾಗಿದೆ. “ಊಟದ ವಿರಾಮದ ಸಮಯದಲ್ಲಿ, ಭಾರತೀಯ ಸಹೋದ್ಯೋಗಿಗಳು ಜರ್ಮನ್ ಸಹೋದ್ಯೋಗಿಗಳಿಗೆ #ಕ್ರಿಕೆಟ್ ಹ್ಯಾಪಿ ಆಡುವುದು ಹೇಗೆಂದು ಕಲಿಸಲು ಪ್ರಯತ್ನಿಸುತ್ತಾರೆ, ದೂತಾವಾಸ ಇನ್ನೂ ಹಾಗೇ ಇದೆ ಎಂದು ವರದಿ ಮಾಡುತ್ತಾರೆ” ಎಂದು ಬರ್ಕಾರ್ಟ್ ಶೀರ್ಷಿಕೆ ನೀಡಿದ್ದಾರೆ.