ಫ್ರೆಂಚ್ ಫುಟ್ಬಾಲ್ ಸೆಲೆಬ್ರಿಟಿ ಕಿಲಿಯಾನ್ ಎಂಬೆಪ್ಪೆರಂತೆಯೇ ಕಾಣುವ ಪಾಕಿಸ್ತಾನೀ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾನೆ.
ಈತನ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದ್ದು, “ಪಾಕಿಸ್ತಾನದಲ್ಲಿ ಎಂಬೆಪ್ಪೆ,” ಎಂದು ಕ್ಯಾಪ್ಷನ್ನ ನೀಡಲಾಗಿದೆ.
ಸಾಂಪ್ರದಾಯಿಕ ಕುರ್ತಾ – ಪೈಜಾಮಾಧಾರಿಯಾಗಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈತ ಕುಳಿತಿರುವ ವೇಳೆ ವಿಡಿಯೋ ಮಾಡಲಾಗಿದೆ. ಈತನ ಮಖಲಕ್ಷಣಗಳು ಹಾಗೂ ಕೇಶಶೈಲಿ ಫ್ರೆಂಚ್ ಫುಟ್ಬಾಲ್ ತಾರೆ ಕಿಲಿಯಾನ್ ಎಂಬೆಪ್ಪೆ ಹಾಗೆಯೇ ಇದೆ ಎಂದು ನೆಟ್ಟಿಗರು ಥಟ್ಟನೇ ಗಮನಿಸಿದ್ದಾರೆ.
https://youtu.be/jkTMgfE2-ZQ