ಚೆನ್ನೈ: ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಸುಪ್ರಿಯಾ ಸಾಹು ಇತ್ತೀಚೆಗೆ ತಮಿಳುನಾಡಿನ ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮದಲ್ಲಿ ಫ್ಲೆಮಿಂಗೋಗಳನ್ನು ಹಿಂಡು ಹಿಂಡಾಗಿ ತೋರಿಸುವ ಸುಂದರವಾದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮವು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿದೆ. ಇದು ಚೆನ್ನೈನಿಂದ ದಕ್ಷಿಣಕ್ಕೆ 370 ಕಿಲೋಮೀಟರ್ ದೂರದಲ್ಲಿದೆ.
“ತಮಿಳುನಾಡಿನ ಮಾಂತ್ರಿಕ ಕೋಡಿಯಾಕ್ಕರೈ/ಪಾಯಿಂಟ್ ಕ್ಯಾಲಿಮೆರ್ ಸಾಗರಗಳಾದ್ಯಂತ ಹಾರುವ ವಲಸೆ ಹಕ್ಕಿಗಳನ್ನು ಸ್ವಾಗತಿಸಲು ಸಂತೋಷವಾಗಿದೆ. ಈಗಾಗಲೇ 50,000 ಕ್ಕೂ ಹೆಚ್ಚು ಫ್ಲೆಮಿಂಗೋಗಳು ಮುತ್ತುಪೆಟ್ಟೈ ಮ್ಯಾಂಗ್ರೋವ್ ಪ್ರದೇಶಕ್ಕೆ ಆಗಮಿಸಿವೆ” ಎಂದು ಅವರು ಬರೆದುಕೊಂಡಿದ್ದಾರೆ.
ಇದೊಂದು ಅದ್ಭುತ ದೃಶ್ಯಕಾವ್ಯ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ನಿಜಕ್ಕೂ ಇದು ಸಾಮಾಜಿಕ ಜಾಲತಾಣವನ್ನು ಮೋಡಿ ಮಾಡುತ್ತಿದೆ ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.