ಕಾರ್ ನಲ್ಲಿ ಡ್ರೈವಿಂಗ್ ಮಾಡುತ್ತಾ ತಂದೆ ಮತ್ತು ಮಗಳು ಇಬ್ಬರೂ ಹಿಂದಿಯ ‘ಅಭಿ ನಾ ಜಾವೋ ಛೋರ್ ಕರ್’ ನ ಗೀತೆಯನ್ನು ಸುಮಧುರವಾಗಿ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಗೀತ ಕಲಾವಿದೆ ಅನನ್ಯಾ ಶರ್ಮಾ ಅವರು ತಮ್ಮ ತಂದೆಯೊಂದಿಗೆ ಹಾಡಿರುವ ಈ ವೀಡಿಯೊವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಇದುವರೆಗೂ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. 1961 ರ ಗೀತೆ ‘ಅಭಿ ನಾ ಜಾವೋ ಛೋರ್ ಕರ್’ ಹಾಡನ್ನು ಹಾಡಿರುವ ಅನನ್ಯಾ ಅವರ ತಂದೆಯ ಗಾಯನ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ. ಈ ವಿಡಿಯೋ ನೋಡಿದ ಬಳಿಕ ಹಲವರು ಇಂತಹ ಹೆಚ್ಚಿನ ವೀಡಿಯೊಗಳನ್ನು ಪೋಸ್ಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.
ನಟಿ ಸುಪ್ರಿಯಾ ಪಿಲ್ಗಾಂವ್ಕರ್ ಕೂಡ ವಿಡಿಯೋ ಕುರಿತು ಪ್ರತಿಕ್ರಿಯಿಸಿದ್ದು, “ಈ ತಂದೆ-ಮಗಳನ್ನು ನೋಡಲು ಅಪ್ಪುಗೆಯ ನಗು ಮತ್ತು ಸಂತೋಷದ ಕಣ್ಣೀರು ಬಂದಿತು. ನಾನು ಇದನ್ನು ಮನೆಯಲ್ಲಿಯೂ ಆಗಾಗ್ಗೆ ನೋಡುತ್ತೇನೆ. ಎಂದಿದ್ದಾರೆ.
2023 ರಲ್ಲಿ ರಿಯಾಲಿಟಿ ಶೋ ಸರಿಗಮಪದಲ್ಲಿ ಭಾಗವಹಿಸಿದ್ದ ಅನನ್ಯಾ ಶರ್ಮಾ, ಇನ್ ಸ್ಟಾಗ್ರಾಂನಲ್ಲಿ 4 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ.