
ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರ ಸಂಬಂಧವೇ ಅನೂಹ್ಯವಾದದ್ದು. ಸಾಕು ಪ್ರಾಣಿಗಳು ತಮ್ಮ ಮಾಲೀಕರ ಮೇಲೆ ಅದಮ್ಯ ಪ್ರೀತಿ ತೋರಿದರೆ, ವನ್ಯಮೃಗಗಳೂ ಏನೂ ಕಮ್ಮಿ ಇಲ್ಲ. ಹೀಗೆ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಆನೆ ಮತ್ತು ಮಾವುತನ ಪ್ರೀತಿಯ ಬಗ್ಗೆ ಚಿತ್ರೀಕರಿಸಲಾಗಿದೆ.
ಸ್ಮಾರ್ಟ್ಫೋನ್ನಲ್ಲಿ ಮಗ್ನನಾಗಿರುವ ಒಬ್ಬ ಮಾವುತ ತನ್ನ ತಲೆಯನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುವಾಗ ಆತನ ಫೋನ್‌ಗೆ ಇಣುಕಿ ಆನೆ ನೋಡುತ್ತಿರುವ ದೃಶ್ಯ ಇದಾಗಿದೆ. ಇದನ್ನು ತಮಿಳುನಾಡಿನ ಆದಿ ಕುಂಬೇಶ್ವರರ್ ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆ.
“ಆನೆ ಮತ್ತು ಅದರ ಮಾವುತನ ನಡುವಿನ ಸಂಬಂಧ ಮತ್ತು ಬಂಧವು” ಎಂದು ಶೀರ್ಷಿಕೆಯಡಿ ಇದು ವೈರಲ್ ಆಗಿದೆ. ಈ ಮುದ್ದಾದ ವಿಡಿಯೋಗೆ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಬಂದಿದ್ದು, 40 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಆನೆ ಮತ್ತು ಮಾವುತನ ಸಂಬಂಧದ ಕುರಿತು ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದು, ಆನೆಗೂ ರೀಲ್ಸ್ ಮಾಡುವ ಆಸೆ ಉಂಟಾಗಿದೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.