
ಜನರಲ್ಲಿ ಜಲ ಸಂರಕ್ಷಣೆಯ ಜಾಗೃತಿ ಮೂಡಿಸುವ ಸಲುವಾಗಿ ಆನೆ ಕೊಳವೆ ಬಾವಿಯಿಂದ ನೀರು ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ಜಲಶಕ್ತಿ ಸಚಿವಾಲಯ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
ತಾಲಿಬಾನಿಗಳ ಸೂಪರ್ ಮಾರುಕಟ್ಟೆಯಲ್ಲಿ ಸಿಗ್ತಿದೆ ಅಮೆರಿಕಾ ಸೈನಿಕದ ಬಂದೂಕು
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಆನೆ ಕೊಳವೆಬಾವಿಯಿಂದ ನೀರನ್ನು ಪಂಪ್ ಮಾಡುತ್ತಿರುವ ದೃಶ್ಯ ಕಾಣಬಹುದು. ಹೆಚ್ಚಾಗಿ ಜನರು ನೈಸರ್ಗಿಕ ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದು ಆಗಾಗ್ಗೆ ನಡೆಯುತ್ತಿರುತ್ತದೆ. ಆದರೆ, ಆನೆ ತನಗೆ ಬೇಕಾದಷ್ಟು ನೀರನ್ನು ತೆಗೆದುಕೊಂಡ ಕೂಡಲೇ ಕೊಳವೆಬಾವಿಯನ್ನು ಪಂಪ್ ಮಾಡುವುದನ್ನು ಆನೆ ನಿಲ್ಲಿಸಿದೆ.
ವಿಡಿಯೋ ಹಂಚಿಕೊಂಡ ಸಚಿವಾಲಯವು, “ಆನೆ ಕೂಡ ಪ್ರತಿ ಹನಿ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತದೆ. ಹಾಗಾದರೆ ನಾವು ಮಾನವರು ಈ ಅಮೂಲ್ಯ ರತ್ನವನ್ನು ಏಕೆ ವ್ಯರ್ಥ ಮಾಡುತ್ತೇವೆ ? ನೀರಿನ ಸಂರಕ್ಷಣೆ ಮಾಡುವುದನ್ನು ಆನೆಯಿಂದ ಕಲಿತುಕೊಳ್ಳಿ” ಎಂದು ಹೇಳಿದೆ.