alex Certify ಫಿಟ್​ ಆಗಿರಲು ನಾಯಿಯೂ ಮಾಡುತ್ತೆ ವರ್ಕೌಟ್…! ಇಲ್ಲಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್​ ಆಗಿರಲು ನಾಯಿಯೂ ಮಾಡುತ್ತೆ ವರ್ಕೌಟ್…! ಇಲ್ಲಿದೆ ವಿಡಿಯೋ

ಇಂದಿನ ಜೀವನ ಪದ್ಧತಿಯಲ್ಲಿ ವರ್ಕೌಟ್​ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಈ ಅವಕಾಶಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ವ್ಯವಹಾರವೂ ನಡೆಯುತ್ತಿದೆ.

ಈ ನಡುವೆ ನಾಯಿಯೊಂದು ವರ್ಕೌಟ್​ ನಿಯಮವನ್ನು ಕಾಪಿ ಮಾಡುವ ಸಣ್ಣ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಸದ್ದು ಮಾಡುತ್ತಿದೆ.

ಟ್ವಿಟರ್​ನಲ್ಲಿ ಗೇಬ್ರಿಯೆಲ್​ ಕಾರ್ನೊ ಹಂಚಿಕೊಂಡ ಕ್ಲಿಪ್​ನಲ್ಲಿ, ನಾಯಿಯು ಟಿವಿ ವೀಕ್ಷಿಸುತ್ತಿದ್ದು ಫಿಟ್​ನೆಸ್​ ಮಾರ್ಗದರ್ಶಕರು ಮಾಡಿದ ವ್ಯಾಯಾಮಗಳನ್ನು ಅದು ಅನುಸರಿಸುವುದನ್ನು ಕಾಣಬಹುದು.

ಆ ನಾಯಿ ಸಿಟ್​- ಅಪ್​ ಮತ್ತು ಪುಷ್​- ಅಪ್​ಗಳನ್ನು ಅಚ್ಚುಕಟ್ಟಾಗಿ ಕಾಪಿ ಮಾಡುತ್ತದೆ. “ಫಿಟ್​ ಆಗಿ ಇರುವುದು ಹೇಗೆ ? ಡಾಬರ್​ಮ್ಯಾನ್​ ಟಿವಿ ನೋಡುವ ಮೂಲಕ ತನ್ನ ವ್ಯಾಯಾಮ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. 50 ಸೆಕೆಂಡ್​ಗಳ ವಿಡಿಯೋ ನೆಟ್ಟಿಗರನ್ನು ಹುರಿದುಂಬಿಸಿದೆ. ಅನೇಕರು ರಂಜನೀಯ ಕಾಮೆಂಟ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...