ಸರ್ಕಾರಿ ಆಸ್ಪತ್ರೆ ಅಂದ್ರೆ ಜನ ಒಂದು ರೀತಿ ಭಯ ಬೀಳ್ತಾರೆ. ಸರ್ಕಾರಗಳು ಆಸ್ಪತ್ರೆಗಳಿಗೆ ಅಂತ ಕೋಟಿ ಕೋಟಿ ಕೊಟ್ಟರೂ ವ್ಯವಸ್ಥೆ ಮಾತ್ರ ಅಧೋಗತಿ. ಇದೀಗ ಇಂಥಹದ್ದೇ ಒಂದು ಘಟನೆ ಮಧ್ಯಪ್ರದೇಶದ ರತ್ಲಾಮ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಈ ಆಸ್ಪತ್ರೆಯಲ್ಲಿ ರೋಗಿಗಳಿಗಷ್ಟೆ ಅಲ್ಲ ನಾಯಿಗಳಿಗೂ ಚಿಕಿತ್ಸೆ ಕೊಡ್ತಾರಾ ಅನ್ನೋ ಅನುಮಾನ ಅಂತೂ ಶುರುವಾಗಿದೆ. ಈ ಅನುಮಾನಕ್ಕೆ ಕಾರಣ ವೈರಲ್ ಆದ ಒಂದು ಫೋಟೋ. ಹೌದು, ಈ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಮೇಲೆ ನಾಯಿಯೊಂದು ಆರಾಮಾಗಿ ಮಲಗಿದೆ. ನಾಯಿ ಮಲಗಿದ್ದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದ್ದಂತೆ ಟೀಕೆಗಳು ಕೂಡ ಹೆಚ್ಚಾಗಿ ಕೇಳಿ ಬರ್ತಾ ಇದೆ. ಅಷ್ಟೆ ಅಲ್ಲ ಕಾಂಗ್ರೆಸ್ ವಕ್ತಾರ ಕೂಡ ಈ ಫೋಟೋ ಹಂಚಿಕೊಂಡಿದ್ದಾರೆ.
ನರೇಂದ್ರ ಸಲೂಜಾ ಅವರು ಟ್ವೀಟ್‌ನಲ್ಲಿ ಬಿಜೆಪಿ ಆಡಳಿತದ ಕುರಿತು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ನಾಯಿಗಳು ಉತ್ತಮ ನಿದ್ರೆ ಮಾಡುತ್ತಿದ್ದರೆ, ರೋಗಿಗಳು ಮಾತ್ರ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದ್ದಾರೆ.
ಇನ್ನು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಪ್ರಭಾಕರ ನಾನಾವರೆ ಅವರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಜೆಯಲ್ಲಿದ್ದ ಕಾರಣ ಈ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.
https://twitter.com/NarendraSaluja/status/1570732064567365632?ref_src=twsrc%5Etfw%7Ctwcamp%5Etweetembed%7Ctwterm%5E1570732064567365632%7Ctwgr%5Ec3d1c97e589100ad74bc3d6449a3302d98aee3c2%7Ctwcon%5Es1_&ref_url=https%3A%2F%2Fwww.udayavani.com%2Fnews-section%2Fnational-news%2Fvideo-of-dog-on-mp-hospital-bed-goes-viral