ಈ ಹಿಂದೆ ಮಕ್ಕಳನ್ನು ಒಂದು ಕಡೆ ಕೂರಿಸಿ ದೇವರ ನಾಮ ಅಥವಾ ಶ್ಲೋಕ ಹೇಳಿ ಅಂತ ನೆಂಟರೋ ಅಥವಾ ಅಜ್ಜಿ ಕೇಳ್ತಾ ಇದ್ದದ್ದು ನೆನಪಿದೆಯಾ? ಪ್ರತಿಮನೆಯಲ್ಲಿ ಈ ರೀತಿ ನಡೆದಿರಲಿಕ್ಕೆ ಸಾಕು.
ಇಲ್ಲೊಬ್ಬ ಅಜ್ಜಿ, ಪುಟ್ಟ ಮಕ್ಕಳಿಗೆ ಹೇಳುವಂತೆ ಅಲೆಕ್ಸಾ ಎಂಬ ಪುಟಾಣಿ ಉಪಕರಣಕ್ಕೆ ಹಾಡು ಹೇಳು ಎಂದು ಹೇಳುವ ವಿಡಿಯೋ ಸಕತ್ ವೈರಲ್ ಆಗಿದೆ.
ಈ ಕಾರಣಕ್ಕೆ ಪೊಲೀಸ್ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ ಬಾಂಗ್ಲಾ ದಂಪತಿ
ನೇಹಾ ಶರ್ಮ ಎಂಬಾಕೆ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಅಜ್ಜಿಯ ವಿಡಿಯೋ ಹಾಕಿದ್ದಾಳೆ. ಇದರಲ್ಲಿ ಅಜ್ಜಿಯು, ಅಲೆಕ್ಸಾಗೆ ಗಣಪತಿ ಭಜನೆ ಹೇಳು, ಇದರಲ್ಲಿ ಗಣಪತಿ ಸ್ತೋತ್ರ ಇರಬೇಕು, ಗಣಪತಿ ಆರತಿ ಇರಬೇಕು, ಗಣಪತಿ ಶ್ಲೋಕ ಇರಬೇಕು ಮತ್ತು ಎಲ್ಲಾ ಇರಬೇಕು ಅಂತ ನಿರ್ದೇಶನ ಕೊಡುತ್ತಿರುವ ವಿಡಿಯೋ ನಿಮ್ಮ ಮನ ಮುಟ್ಟದೆ ಇರುವುದಿಲ್ಲ.
ಈ ವಿಡಿಯೋ ಈಗಾಗಲೇ ಹದಿನಾರು ಲಕ್ಷ ವೀಕ್ಷಣೆ ಆಗಿದ್ದು, ನೆಟ್ಟಿಗರು ಅಜ್ಜಿಯ ಮುಗ್ಧತೆಗೆ ಮನ ಸೋತಿದ್ದಾರೆ. ಮೊದಲ ಬಾರಿಗೆ ತನ್ನನ್ನು ಯಾರೋ ಮನುಷ್ಯರಂತೆ ಕಾಣುತ್ತಿರುವುದಕ್ಕೆ ಅಲೆಕ್ಸಾ ಕೂಡ ಖುಷ್ ಆಗಿರಬೇಕು.
https://www.youtube.com/watch?v=Ox3xpn6yA78&feature=youtu.be