ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಪರಸ್ಪರ ತಬ್ಬಿಕೊಂಡು, ಮುತ್ತಿಟ್ಟುಕೊಂಡು ಮುದ್ದಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ತೀರಾ ನೆನ್ನೆ ಮೊನ್ನೆಯ ದಿನದಂದು ಇದೇ ದೆಹಲಿ ಮೆಟ್ರೋದಲ್ಲಿ ತುಂಡುಡುಗೆ ತೊಟ್ಟು ಓಡಾಡಿದ ಯುವತಿಯೊಬ್ಬಳು ಭಾರೀ ಪ್ರಚಾರ ಪಡೆದಿದ್ದಳು.
ಇದೀಗ ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮುತ್ತು ಕೊಟ್ಟುಕೊಂಡ ಜೋಡಿಯ ವಿಡಿಯೋ ಬಗ್ಗೆ ಟ್ವಿಟರ್‌ನಲ್ಲಿ ಭಾರೀ ಟೀಕೆಗಳು ಕೇಳಿ ಬರುತ್ತಿವೆ.
ಮೊದಲಿಗೆ ಈ ಜೋಡಿಯ ಅನುಮತಿಯೇ ಇಲ್ಲದಂತೆ ಅವರ ವಿಡಿಯೋ ಮಾಡಿದ್ದೇಕೆ ಎಂದು ಪ್ರಶ್ನೆಗೈದಿರುವ ನೆಟ್ಟಿಗರು, “ಪಾಶ್ಚಾತ್ಯ ದೇಶಗಳಲ್ಲಿ ಹೀಗೆ ತಮ್ಮ ಪ್ರೇಮವನ್ನು ಮುಕ್ತವಾಗಿ ವ್ಯಕ್ತಪಡಿಸುವಾಗ ನಾವ್ಯಾಕೆ ಇನ್ನೂ ಹಾಗೇ ಇದ್ದೇವೆ?” ಎಂದು ಪ್ರಶ್ನಿಸಿ, ಈ ಕಿಸ್ಸಿಂಗ್ ಜೋಡಿಗಳ ಬೆಂಬಲಕ್ಕೆ ನಿಂತಿದ್ದಾರೆ ನೆಟ್ಟಿಗರು.
“ದೆಹಲಿ ಮೆಟ್ರೋದಲ್ಲಿ ಮುತ್ತು ಕೊಟ್ಟರು ಎಂಬ ಕಾರಣಕ್ಕೆ ಏಕೆ ಹೀಗೆಲ್ಲಾ ಸುದ್ದಿಯಾಗಬೇಕು? ಮುಂಬಯಿಗೆ ಬಂದು ನೋಡಿ. ಎಲ್ಲೆಂದರಲ್ಲಿ ಮುತ್ತಿಕ್ಕಿಕೊಳ್ಳುವ ಜೋಡಿಗಳೂ ಕಾಣಸಿಗುತ್ತಾರೆ ಹಾಗೂ ಜನರು ತಂತಮ್ಮ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ,” ಎಂದು ಅರುಂಧತಿ ಹೆಸರಿನ ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.