ಟೀ ಮಾರಾಟಗಾರನೊಬ್ಬ ತನ್ನ ಅಂಗಡಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲು ಹಿಟ್ಟನ್ನು ಕಾಲಿನಿಂದ ಕಲೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಅಂಗಡಿಯನ್ನೂ ಸೀಲ್ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಬಂಧಿತ ವ್ಯಕ್ತಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದೆ.
ಹೋಟೆಲ್ ಓಂಪೋರಾ ಬಡ್ಗಾಮ್ನಲ್ಲಿರುವ ರೆಹಾಡುದಲ್ಲಿದ್ದು, ಉತ್ತರ ಪ್ರದೇಶದ ಮೆಹಬೂಬ್ ಹುಸೇನ್ ಅವರ ಮಗ ಇಮ್ರಾನ್ ಹುಸೇನ್ ಈ ಕುಕೃತ್ಯ ಎಸಗಿದವನಾಗಿದ್ದಾನೆ ಎಂದು ಗುರುತಿಸಲಾಗಿದೆ.
ಬುಡ್ಗಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಟ್ಟದಾಗಿ ಆಹಾರ ಪದಾರ್ಥಗಳನ್ನು ತಯಾರಿಸಿದ ಅಂಗಡಿಯವರನ್ನು ಬಂಧಿಸಲು ಪೊಲೀಸರು ಮಾಡಿದ ಪ್ರಯತ್ನವನ್ನು ಜನರು ಶ್ಲಾಘಿಸಿದ್ದಾರೆ.