ಬ್ರೆಜಿಲ್: ಮನುಷ್ಯ ಪ್ರಾಣಿಗಿಂತಲೂ ಕ್ರೂರ ಅನ್ನೊದಕ್ಕೆ ಈ ಒಂದು ವಿಡಿಯೋ ಬೆಸ್ಟ್ ಎಗ್ಸಾಂಪಲ್. ಈ ಒಂದು ಭಯಾನಕ ಘಟನೆ ನಡೆದಿರೋದು ಬ್ರೆಜಿಲ್ನಲ್ಲಿ.
ಇಲ್ಲಿನ ಫೆಡರಲ್ ಹೈವೇ ಪೊಲೀಸರಿಬ್ಬರು ಮಾನಸಿಕ ಅಸ್ವಸ್ಥನಾಗಿರೋ ವ್ಯಕ್ತಿಯನ್ನ ಬಲವಂತವಾಗಿ ಬಂಧಿಸಿದ್ದಾರೆ. ಕೊನೆಗೆ ಆ ವ್ಯಕ್ತಿಯನ್ನ ಕಾರಿನ ಡಿಕ್ಕಿಯಲ್ಲಿ ಹಾಕಿ, ಉಸಿರು ಗಟ್ಟಿಸಿ ಸಾಯೋ ಹಾಗೆ ಮಾಡಿದ್ದಾರೆ. ಆ ಒಂದು ವಿಡಿಯೋ ಈಗ ಬ್ರೆಜಿಲ್ ಜನರ ಕೋಪಕ್ಕೆ ಕಾರಣವಾಗಿದೆ. ಇಲ್ಲಿ ಗಮನಿಸಬೇಕಾಗಿರೋ ಇನ್ನೊಂದು ವಿಚಾರ, ಬ್ರೆಜಿಲ್‌ನ ಪೊಲೀಸ್ ಅಧಿಕಾರಿಗಳು ಈ ರೀತಿ ನಿರ್ದಯವಾಗಿ ಸಾಯುವಂತೆ ಮಾಡಿದ್ದು ಕಪ್ಪು ವರ್ಣದ ವ್ಯಕ್ತಿಯನ್ನ.
ರೈತರ ಖಾತೆಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ ಜಮಾ ಮಾಡಲು ಒತ್ತಾಯ
38 ವರ್ಷದ ಜೆನಿವಾಲ್ಡೋ ಡಿ ಜೀಸಸ್ ಸ್ಯಾಂಟೋಸ್ ಎಂಬುವವರನ್ನ ಬುಧವಾರ ಉಂಬಾಬಾ ನಗರದಲ್ಲಿ ಫೆಡರಲ್ ಹೆದ್ದಾರಿ ಪೊಲೀಸರು ತಡೆಹಿಡಿದಿದ್ದಾರೆ. ಆ ನಂತರ ಹೆಲ್ಮೆಟ್ ಧರಿಸಿರೋ ಆ ಇಬ್ಬರು ಪೊಲೀಸ್ ಅಧಿಕಾರಿಗಳು ಆ ಕಪ್ಪು ವರ್ಣದ ವ್ಯಕ್ತಿಗೆ ಚೆನ್ನಾಗಿ ಥಳಿಸಿದ್ದಾರೆ. ಕೊನೆಗೆ ಕಾರ್‌ನ ಡಿಕ್ಕಿಯಲ್ಲಿ ಹಾಕಿ, ಅದರೊಳಗೆ ಅಶ್ರುವಾಯು ಹೊಗೆಯನ್ನ ತುಂಬಿಸಿದ್ದಾರೆ. ಇದೆಲ್ಲವೂ ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
ಕಾರಿನೊಳಗೆ ಉಸಿರಾಡೋಕ್ಕಾಗದೇ ನರಳಾಡಿ, ಒದ್ದಾಡಿ, ಆ ಕಪ್ಪು ವರ್ಣದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈಗ ಇದು ಮರಣೋತ್ತರ ಪರೀಕ್ಷೆಯಲ್ಲೂ ಸಾಬೀತಾಗಿದೆ. ಬ್ರೇಜಿಲ್ ಪೊಲೀಸರು ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಕೊಟ್ಟ ಚಿತ್ರಹಿಂಸೆ ನೋಡಿ ಜನ ರೊಚ್ಚಿಗೆದ್ದಿದ್ದಾರೆ. ಈ ಹಿಂದೆಯೂ ಬ್ರೆಜಿಲ್ ಪೊಲೀಸರು ಕಪ್ಪು ವರ್ಣದ ಜನರೊಂದಿಗೆ ಇದೇ ರೀತಿ ಕ್ರೂರವಾಗಿ ನಡೆದುಕೊಂಡಿದ್ದಾರೆ. ಇಲ್ಲಿನ ಫೋರಂ ಆಫ್ ಪಬ್ಲಿಕ್ ಸೆಕ್ಯುರಿಟಿ ಪ್ರಕಾರ ಬ್ರೆಜಿಲ್ ಪೊಲೀಸರು 2020ರಲ್ಲಿ ನಾನಾ ಕಾರಣಗಳಿಂದ 6,416 ಜನರನ್ನ ಕೊಂದಿದ್ದಾರೆ. ಅದರಲ್ಲಿ ಶೇಕಡಾ 80ರಷ್ಟು ಜನರ ಕರಿಯರಿದ್ದಾರೆ.