ಇಂದು ದೊಡ್ಡವರಷ್ಟೇ ಅಲ್ಲದೇ ಮಕ್ಕಳು ಸಹ ನಿರಂತರವಾಗಿ ಮೊಬೈಲ್ ಬಳಸ್ತಿರುತ್ತಾರೆ. ಇದು ಹೆಚ್ಚಿನ ಪೋಷಕರನ್ನು ಭಯಭೀತಗೊಳಿಸುತ್ತದೆ.
ಹೆಚ್ಚಾಗಿ ಮೊಬೈಲ್ ಬಳಕೆ ಅವರ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಆತಂಕ ಹುಟ್ಟಿಸುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅಂತಹ ಒಂದು ವೀಡಿಯೊದಲ್ಲಿ ಬಾಲಕನು ಮಲಗಿರುವಾಗ ಮೊಬೈಲ್ ಹಿಡಿದುಕೊಂಡಿರುವಂತೆ, ಅದರೊಂದಿಗೆ ಆಟವಾಡುತ್ತಿರುವಂತೆ ಕಾಣುತ್ತಾನೆ.
ಮೊಬೈಲ್ ಹಿಡಿದಿರುವಂತೆ ಭ್ರಮೆಯಲ್ಲಿರುವ ಪೋರ ಅದರಲ್ಲಿ ರೀಲ್ಸ್ ಗಳನ್ನ ಸ್ಕ್ರಾಲ್ ಮಾಡುತ್ತಿರುವಂತೆ ಬೆರಳುಗಳನ್ನಾಡಿಸುತ್ತಾನೆ.
ಈ ರೀತಿ ವರ್ತಿಸುತ್ತಿರುವಾಗ ನಿದ್ರೆಯಲ್ಲಿ ಬಾಲಕ ಅಳುವುದನ್ನು ತೋರಿಸುತ್ತದೆ. ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ.
ಈ ವಿಡಿಯೋ ಅಂತರ್ಜಾಲದಲ್ಲಿ ಹೆಚ್ಚು ಗಮನ ಸೆಳೆದಿದ್ದು ಮಕ್ಕಳ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
https://twitter.com/puqet2/status/1671755061221892098?ref_src=twsrc%5Etfw%7Ctwcamp%5Etweetembed%7Ctwterm%5E1671755061221892098%7Ctwgr%5E7d34266df06fcdc2e8270e5032fbf527cd659f00%7Ctwcon%5Es1_&ref_url=https%3A%2F%2Fwww.latestly.com%2Fsocially%2Fsocial-viral%2Fvideo-of-boy-scrolling-reels-in-phone-while-sleeping-goes-viral-netizens-express-concern-over-mobile-addiction-5218939.html