ಆಸ್ಕರ್ ಸ್ಮಿತ್ ಟೈಗರ್ಸ್ ಮತ್ತು ವೆಸ್ಟರ್ನ್ ಬ್ರಾಂಚ್ ಬ್ರುಯಿನ್ಸ್ ನಡುವೆ ಆಡಿದ ಹೈಸ್ಕೂಲ್ ಅಮೆರಿಕನ್ ಫುಟ್‌ಬಾಲ್ ಪಂದ್ಯವೀಗ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕ ಮತ್ತು ಕೆನಡಾಗಳಲ್ಲಿ ಹೈಸ್ಕೂಲ್ ಗುಂಪುಗಳು ಆಡುವ ಆಟ ಇದಾಗಿದ್ದು, ಇದರ ಒಂದು ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
ಆಸ್ಕರ್ ಸ್ಮಿತ್ ಟೈಗರ್ಸ್ ಈ ಹಿಂದೆ ನಿಯಮಿತ ಋತುವಿನಲ್ಲಿ ಎರಡು ಪಂದ್ಯಗಳನ್ನು ಗೆದ್ದಿತ್ತು, ಆದಾಗ್ಯೂ, ನವೆಂಬರ್ 19 ರಂದು ರೋಚಕ ಪಂದ್ಯ ನಡೆದಿದೆ. ವೆಸ್ಟರ್ನ್ ಬ್ರಾಂಚ್ ಬ್ರುಯಿನ್ಸ್‌ನ ಆಟಗಾರ ಚೆಂಡನ್ನು ಒದ್ದಾಗ ಅದು ಟೈಗರ್ಸ್ ಆಟಗಾರನನ್ನು ಒಂದು ಕ್ಷಣ ಗೊಂದಲಕ್ಕೆ ತಳ್ಳಿತ್ತು.
ಟೈಗರ್ಸ್ ರಿಟರ್ನರ್ ಚೆಂಡನ್ನು ನೆಲದ ಮೇಲಿರುವಂತೆ ಬಿಟ್ಟಿದ್ದೇ ಈ ಗೊಂದಲಕ್ಕೆ ಕಾರಣ. ಚೆಂಡಿನ ಬಳಿ ಬಂದ ಮೊದಲ ಎರಡು ತಂಡದ ಸದಸ್ಯರು ಕೂಡ ಏನೂ ಮಾಡದೆ ಮುಗಿಬಿದ್ದರು. ಬ್ರೂಯಿನ್ಸ್‌ನ ಮೂರನೇ ಆಟಗಾರ ಚೆಂಡಿನ ಮೇಲೆ ಹಾರಿರುವ ತಮಾಷೆಯ ವಿಡಿಯೋ ಇದಾಗಿದೆ.
ಅಮೆರಿಕನ್ ಫುಟ್‌ಬಾಲ್‌ನ ನಿಯಮಗಳ ಪ್ರಕಾರ, ಕಿಕ್‌ಆಫ್‌ನಲ್ಲಿ ಚೆಂಡನ್ನು 10 ಗಜಗಳಷ್ಟು ದಾಟಿದಾಗ, ಅದನ್ನು ಲೈವ್ ಎಂದು ಪರಿಗಣಿಸಲಾಗುತ್ತದೆ.
ಇದರ ವಿಡಿಯೋ ನೋಡಿ ಫುಟ್‌ಬಾಲ್ ಅಭಿಮಾನಿಗಳನ್ನು ನಕ್ಕು ನಕ್ಕು ಬೀಳುತ್ತಿದ್ದಾರೆ. ಎರಡೂ ಗುಂಪಿಗೆ ಸರಿಯಾದ ತರಬೇತಿ ಇಲ್ಲದೇ ಇರುವುದು ಇದಕ್ಕೆ ಕಾರಣ, ಇದು ಕಳಪೆ ತರಬೇತಿಯ ಪರಿಣಾಮ ಎಂದು ಹಲವರು ಕಿಡಿ ಕಾರಿದ್ದಾರೆ.