ಭಾರತದಲ್ಲಿ ಹದಿಹರೆಯದವರು ಸ್ಟ್ರೀಟ್ ರೇಸಿಂಗ್ನಲ್ಲಿ ಭಾಗವಹಿಸುವ ಘಟನೆಗಳು ಸಾಮಾನ್ಯ. ಆದರೆ ಈ ಬಾರಿ ನಾವು ಹೇಳ ಹೊರಟಿರುವುದು ಆಟೋ ರಿಕ್ಷಾಗಳು ಬೀದಿಗಳಲ್ಲಿ ಡ್ರ್ಯಾಗ್ ರೇಸಿಂಗ್ ನಡೆಸಿದೆ ಬಗ್ಗೆ. ಈ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಆಟೋರಿಕ್ಷಾಗಳು ಡ್ರ್ಯಾಗ್ ರೇಸಿಂಗ್ ನಡೆಸಿದ ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರ ಗಮನಕ್ಕೂ ಬಂದಿದೆ. ರಿಕ್ಷಾಗಳ ವಿಡಿಯೋವನ್ನು ಬೇರೆ ಬೇರೆ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಈ ರೇಸ್ ವಿಡಿಯೋವನ್ನು ಬಹು ಕೋನಗಳಿಂದ ಚಿತ್ರಿಸಲಾಗಿದ್ದು, ವಿಭಿನ್ನ ಶಾಟ್ಸ್ ಗಳನ್ನು ಸೇರಿಸಿ ಹಲವಾರು ವಿಡಿಯೋಗಳನ್ನು ಸಂಯೋಜಿಸಲಾಗಿದೆ.
ಯುದ್ದ ಪೀಡಿತ ಉಕ್ರೇನ್ ನಿಂದ ವಿದ್ಯಾರ್ಥಿಗಳ ಸ್ಥಳಾಂತರ; ಕೇಂದ್ರ ಸರ್ಕಾರದ ನಡೆಗೆ ʼಸುಪ್ರೀಂʼ ಶ್ಲಾಘನೆ
ಈ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿವೆ. ಹೈದರಾಬಾದ್ನ, ಸಂತೋಷ್ ನಗರ ಪಿಸಲ್ ಬಂಡಾ ಅಡ್ಡರಸ್ತೆ ಮತ್ತು ಚಂದ್ರಾಯನಗುಟ್ಟ ಕ್ರಾಸ್ ನಡುವೆ ಡ್ರ್ಯಾಗ್ ರೇಸಿಂಗ್ ನಡೆದಿದೆ. ವಿಡಿಯೊಗಳು ವೈರಲ್ ಆದ ನಂತರ ಸ್ಥಳೀಯ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಕ್ರಮ ಕೈಗೊಂಡರು ಎಂದು ವರದಿಯಾಗಿದೆ.
ಸಿಸಿ ಟಿವಿ ದೃಶ್ಯಾವಳಿಗಳ ಪರಿಶೀಲಿಸಿ, ರೇಸಿಂಗ್ನಲ್ಲಿ ಭಾಗವಹಿಸಿದ್ದವರನ್ನು ಬಂಧಿಸಲಾಗಿದೆ. ರೇಸ್ನಲ್ಲಿ ಭಾಗವಹಿಸಿದ್ದ ಆಟೋರಿಕ್ಷಾ ಚಾಲಕರೆಲ್ಲರೂ ಟೌಲಿಚೌಕಿಯ ನಿವಾಸಿಗಳೆಂದು ತಿಳಿದು ಬಂದಿದೆ.