ಈಗ ಎಲ್ಲೆಲ್ಲೂ ದೀಪಾವಳಿಯ ಸಡಗರ. ಅದಕ್ಕಾಗಿಯೇ ಎಲ್ಲೆಡೆ ಪಟಾಕಿಯ ಸದ್ದು. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಶೇರ್ ಆಗಿರುವ ಪಟಾಕಿಯ ಸದ್ದು ಮಾತ್ರ ನೆಟ್ಟಿಗರನ್ನು ಕುತೂಹಲಕ್ಕೆ ತಳ್ಳಿದೆ.
ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ವ್ಯಕ್ತಿಯೊಬ್ಬ ಸಿಗರೇಟ್ನಿಂದ ಪಟಾಕಿ ಪಟಪಟ ಎನ್ನಿಸುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ. ಈತನನ್ನು ರಾಕೆಟ್ ಮ್ಯಾನ್ ಎಂದು ಅವರು ತಮಾಷೆ ಮಾಡಿದ್ದಾರೆ.
ಅಸಲಿಗೆ ಈ ವಿಡಿಯೋ ತೆಗೆದದ್ದು 2018ರಲ್ಲಿ. ಈ ವಿಡಿಯೋದಲ್ಲಿರುವ ವ್ಯಕ್ತಿ ಮೊಲ್ಲಾ ಸಂಜೀವ ರಾವ್. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಹಳ್ಳಿಯವರು. ಆ ಸಮಯದಲ್ಲಿ ಸಣ್ಣ ಪಟಾಕಿ ಕಾರ್ಖಾನೆಯನ್ನು ನಡೆಸುತ್ತಿದ್ದ ಇವರು, ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಪ್ರಜಾ ಸಂಕಲ್ಪ ಯಾತ್ರೆಯ ವೇಳೆ ಅವರನ್ನು ಸ್ವಾಗತಿಸುವಾಗ ಸಿಗರೇಟ್ ಮೂಲಕ ಪಟಾಕಿ ಹಾರಿಸಿದ್ದಾರೆ. ಅದರ ವಿಡಿಯೋ ಪುನಃ ಈಗ ವೈರಲ್ ಆಗಿದೆ.
“ರಾವ್ ಅವರು ಕೇವಲ 20 ಸೆಕೆಂಡುಗಳ ಅವಧಿಯಲ್ಲಿ 11 ರಾಕೆಟ್‌ಗಳನ್ನು ಉಡಾವಣೆ ಮಾಡಿದರು. ನಾಸಾದ ಸಂಸ್ಥಾಪಕರು ಖಂಡಿತವಾಗಿಯೂ ಭಾರತದಿಂದ ಬಂದವರು” ಎಂದು ನಂದಾ ಹಾಸ್ಯಭರಿತವಾಗಿ ಶೀರ್ಷಿಕೆ ನೀಡಿದ್ದಾರೆ.