2021ರ ವಿಶ್ವ ಪರ್ಫೆಕ್ಟ್ ಪೇಜೆಂಟ್ ಮತ್ತು ಮಾಡೆಲ್ ಶೋಧ ಸ್ಪರ್ಧೆಯ ಯುವತಿಯರ ವಿಭಾಗದಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಎರಡು ವರ್ಷದ ಪುಟ್ಟ ಬಾಲಕಿ ಈಗ ಟಿಕ್ಟಾಕ್ನ ಸೂಪರ್ಸ್ಟಾರ್ ಆಗಿದ್ದಾಳೆ.
ಬೀಟ್ಸ್ ಇರುವ ಹಾಡಿಗೆ ಪಕ್ಕಾ ಮಾಡೆಲ್ನಂತೆ ಪುಟ್ಟ ಹೆಜ್ಜೆ, ವೈಯಾರದ ನಡುಗೆ ತೋರಲು ಯತ್ನಿಸಿದ ಔಬ್ರಿಯಾನ ಕ್ಯಾಸ್ಟಾಗ್ನ ನೆಟ್ಟಿಗರ ಮನ ಗೆದ್ದಿದ್ದಾಳೆ.
ಅಂಧ ಯುವತಿಗೆ ರೆಸ್ಟೋರೆಂಟ್ ಸಿಬ್ಬಂದಿ ಕೊಟ್ಟ ಸರ್ಪೈಸ್ ಏನು ಗೊತ್ತಾ….?
ಅದರಲ್ಲೂ ರ್ಯಾಂಪ್ ಮೇಲೆ ಒಂದಷ್ಟು ದೂರ ಕ್ರಮಿಸಿ, ವಿಶಿಷ್ಟ ಭಂಗಿಯಲ್ಲಿ ನಿಂತು ಫೋಟೊಗ್ರಾಫರ್ಗಳಿಗೆ ಪೋಸ್ ಕೊಡುವ ಮಾಡೆಲ್ಗಳ ಶೈಲಿಯನ್ನೇ ಅನುಕರಿಸಿರುವ ಪುಟ್ಟ ಹುಡುಗಿಗೆ ಛಾಯಾಗ್ರಾಹಕ ಕೂಡ ಮಾರು ಹೋಗಿದ್ದಾರೆ.
ಫೋಟೋಗ್ರಾಫರ್ ಕ್ರಿಸ್ಟೀನ್ ವೀವರ್ ಅವರು ಈ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಪುಟ್ಟ ಹುಡಗಿಯ ಸೂಪರ್ ಮಾಡೆಲ್ ನಡಿಗೆಯ ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
https://www.youtube.com/watch?v=VtQMEVtxMwI