ಚಿರತೆಗಳು ಊರ ಒಳಗೆ ಬರುತ್ತಿರುವುದು ಈಗ ಹೊಸ ವಿಷಯವೇನಲ್ಲ. ಬೆಂಗಳೂರಿನಲ್ಲಿಯೂ ಈ ಘಟನೆ ನಡೆಯುತ್ತಿದೆ. ಜನರು ಅರಣ್ಯಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿ ಪ್ರಾಣಿಗಳ ಪ್ರದೇಶಕ್ಕೆ ಲಗ್ಗೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವನ್ಯಮೃಗಗಳು ಬೇರೆ ದಾರಿ ಇಲ್ಲದೇ ಊರೊಳಗೆ ನುಗ್ಗುತ್ತಿವೆ.
ಇದೀಗ ನೈನಿತಾಲ್‌ನ ವಿಡಿಯೋ ಒಂದು ವೈರಲ್ ಆಗಿದೆ. ಇಲ್ಲಿ ಚಿರತೆಯೊಂದು ಓಡಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಗಿರಿಧಾಮದ ಖಾಲಿ ಬೀದಿಯಲ್ಲಿ ಚಿರತೆ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸಾಕೇತ್ ಬಡೋಲಾ ಅವರು ಹಂಚಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ, ಪ್ರಾಣಿಯು ಕ್ಯಾಮೆರಾವನ್ನು ನೋಡಿ ಅತ್ತ ಕಡೆ ಚಲಿಸುವುದನ್ನು ನೋಡಬಹುದು.
ಪೋಸ್ಟ್ ಮಾಡಿದ ನಂತರ ವೀಡಿಯೊ 18,000 ವೀಕ್ಷಣೆಗಳು ಮತ್ತು 11,000 ಇಂಪ್ರೆಶನ್‌ಗಳನ್ನು ಸಂಗ್ರಹಿಸಿದೆ. ಬಳಕೆದಾರರೊಬ್ಬರು, ಉತ್ತರಾಖಂಡದ ನೈನಿತಾಲ್‌ನಿಂದ ನಾವು ವನ್ಯಜೀವಿ ಸಂರಕ್ಷಣೆಯಲ್ಲಿ ನಂಬರ್ 1 ರಾಜ್ಯ ಎಂದು ಹೆಮ್ಮೆಯಿಂದ ಹೇಳಬಹುದು ಎಂದಿದ್ದಾರೆ.