
ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದು ವಯೋವೃದ್ಧರೊಬ್ಬರು ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮುಂಬೈನ ಪೊವೈ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.
ವೃದ್ಧರೊಬ್ಬರು ಆ ಪ್ರದೇಶದಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಾರೆ. ಈ ವೇಳೆ ಬಸ್ ಚಾಲಕ ವಾಹನದ ಮುಂದೆ ನಿಂತಿರುವ ವೃದ್ಧರ ಬಗ್ಗೆ ತಿಳಿಯದೆ ಬಸ್ ಚಲಾಯಿಸುತ್ತಾನೆ.
ಇದರಿಂದ ಬಸ್ಸಿನಡಿ ವೃದ್ಧರು ಸಿಲುಕಿ ಹಾಕಿಕೊಳ್ಳುತ್ತಾರೆ. ಕೆಳಕ್ಕೆ ವೃದ್ಧರು ಬಿದ್ದ ಬಳಿಕವೂ ಬಸ್ ಸ್ವಲ್ಪ ದೂರ ಮುಂದೆ ಚಲಿಸುತ್ತದೆ. ತಕ್ಷಣ ಸಾರ್ವಜನಿಕರು ಭಯಭೀತಗೊಳ್ಳುತ್ತಾರೆ.
ವೃದ್ಧರು ಬಸ್ಸಿನ ಕೆಳಗೆ ಹೋಗುತ್ತಿರುವುದನ್ನು ಕಂಡ ಜನ ಜೋರಾಗಿ ಕಿರುಚುತ್ತಾರೆ. ಬಸ್ ಚಾಲಕ ತಕ್ಷಣವೇ ವಾಹನವನ್ನು ನಿಲ್ಲಿಸುತ್ತಾರೆ. ಬಸ್ಸಿನಡಿ ಸಿಲುಕಿದ ವ್ಯಕ್ತಿ ನಂತರ ಬಸ್ ನ ಹಿಂಬದಿಯಿಂದ ಸರಿದು ಬರುತ್ತಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.
ಲೇಕ್ ಸೈಡ್ ಕಾಂಪ್ಲೆಕ್ಸ್ ಬಳಿಯ ಎವರೆಸ್ಟ್ ಹೈಟ್ಸ್ ಕಟ್ಟಡದ ಹೊರಗೆ ಮಂಗಳವಾರ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.